ಕುಮಾರಸ್ವಾಮಿ ವಿದ್ಯಾಲಯದಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಚಾಲನೆ

0

ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇದರ 2024 – 25ನೇ ಶೈಕ್ಷಣಿಕ ವರ್ಷದ ಪಠ್ಯೇತರ ಚಟುವಟಿಗಳಾದ ಚಿತ್ರಕಲೆ, ಭರತನಾಟ್ಯ, ಚೆಸ್, ಕರಾಟೆ ಹಾಗೂ ಯಕ್ಷಗಾನ, ಲಲಿತ ಕಲಾ ತರಗತಿಗಳು ಜು.4 ಪ್ರಾರಂಭಗೊಂಡಿತು.

ಲಲಿತ ಕಲಾ ತರಗತಿಗಳ ಉದ್ಘಾಟನೆಯನ್ನು ಸುಬ್ರಹ್ಮಣ್ಯ ಮರಕತ ದೀಪ ಬೆಳಗಿಸಿ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಸಂಚಾಲಕರು ಚಂದ್ರಶೇಖರ್ ನಾಯರ್, ಶಾಲಾ ಮುಖ್ಯ ಶಿಕ್ಷಕಿ ವಿದ್ಯಾರತ್ನ, ಭರತನಾಟ್ಯ ಶಿಕ್ಷಕಿಯಾದ ವಿದುಷಿ ರಶ್ಮಿ, ಚಿತ್ರಕಲಾ ಶಿಕ್ಷಕರಾದ ಪ್ರಸನ್ನ ಐವರ್ನಾಡು ಉಪಸ್ಥಿತರಿದ್ದರು.

ಚಿತ್ರಕಲೆಯನ್ನು ಪ್ರಸನ್ನ ಐವರ್ನಾಡು, ಭರತನಾಟ್ಯವನ್ನು ವಿದುಷಿ ರಶ್ಮಿ, ಕರಾಟೆಯನ್ನು ದಿನೇಶ್, ಚೆಸ್ ತರಬೇತಿಯನ್ನು ಜಗನ್ನಾಥ್, ಹಾಗೂ ಯಕ್ಷಗಾನವನ್ನು ಗಿರೀಶ್ ಗಡಿಕಲ್ಲು ತರಬೇತಿ ನೀಡಲಿದ್ದಾರೆ.