ಏನೆಕಲ್ಲು ಮುಖ್ಯ ರಸ್ತೆಯ ಶ್ರೀ “ಹರಿಭಾನು ನಿಲಯ” ಚಿದ್ಗಲ್ ಮನೆಯಲ್ಲಿ ನಿವೃತ್ತ ವೈದ್ಯಾಧಿಕಾರಿ ಡಾ| ಭಾನುಮತಿ ಹರಿಶ್ಚಂದ್ರರವರ ಮಾಲಕತ್ವದ ಶ್ರೀ ಹರಿ ಕ್ಲಿನಿಕ್ ಜು. 3ರಂದು ಶುಭಾರಂಭಗೊಂಡಿತು.
ಏನೆಕಲ್ಲು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಜಯಲಕ್ಷ್ಮಿ ಕ್ಲಿನಿಕ್‌ನ್ನು ದೀಪ ಉಜ್ವಲಿಸುವ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಏನೆಕಲ್ಲು ಸಹಕಾರಿ ಸಂಘದ ನಿರ್ದೇಶಕಿ ಶ್ರೀಮತಿ ವೇದಾವತಿ, ಇನ್ನರ್‌ವೀಲ್ ಕ್ಲಬ್ ಸುಬ್ರಹ್ಮಣ್ಯ ಇದರ ಅಧ್ಯಕ್ಷೆ ಶ್ರುತಿ ಮಂಜುನಾಥ್, ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದರು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಚಿದ್ಗಲ್ ಸ್ವಾಗತಿಸಿ, ನೇಹಾ ಚಿದ್ಗಲ್ ಧನ್ಯವಾದ ಗೈದರು.
ಡಾ|ಭಾನುಮತಿ ಹರಿಶ್ಚಂದ್ರರವರು ಪ್ರತಿ ದಿನ ಬೆಳಿಗ್ಗೆ 8.30ರಿಂದ 10.30 ರ ತನಕ, ಸಂಜೆ 5.30ರಿಂದ 7.30ರ ತನಕ, ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತುರ್ತು ಚಿಕಿತ್ಸೆಗೆ ಲಭ್ಯವಿರುತ್ತಾರೆ.