ಸೇತುವೆಯ ‌ಕೆಳಭಾಗದಲ್ಲಿ ತಡೆಬೇಲಿ ಇಲ್ಲದೆ ಅಪಾಯಕ್ಕೆ ಆಹ್ವಾನ ನೀಡುವಂತಿದೆ ಓಡಬಾಯಿ ತೂಗು ಸೇತುವೆ

0

ಸುಳ್ಯದ ಓಡಬಾಯಿಯಲ್ಲಿರುವ ಸುಳ್ಯ ಮತ್ತು ದೊಡ್ಡೇರಿ ಸಂಪರ್ಕದ ತೂಗು ಸೇತುವೆಯ ಕೆಲಭಾಗದಲ್ಲಿ ತಡೆಬೇಲಿ ಇಲ್ಲದೆ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ.


ಸುಳ್ಯ ರೋಟರಿ ಸಂಸ್ಥೆ ಮತ್ತು ಇನ್ಪೋಸಿಸ್ ನ ವಿಶೇಷ ಅನುದಾನದಿಂದ ದೊಡ್ಡೇರಿ ಭಾಗದ ನಾಗರಿಕರ ಬಹು ಬೇಡಿಕೆಗೆ ಅನುಗುಣವಾಗಿ ತೂಗು ಸೇತುವೆ ನಿರ್ಮಿಸಲಾಗಿತ್ತು. ಸುಳ್ಯ ಮತ್ತು ಅಜ್ಜಾವರ ಗ್ರಾಮವನ್ನು ಸಂಪರ್ಕಿಸುವ ಕೊಂಡಿಯಾಗಿ ದಿನಕ್ಕೆ ನೂರಾರು ಮಂದಿ ಈ ಸೇತುವೆಯನ್ನು ಅವಲಂಬಿಸಿದ್ದಾರೆ.


ತೂಗು ಸೇತುವೆಯ ಮುಖ್ಯ ರಸ್ತೆಯಿಂದ ಸೇತುವೆಗೆ ಹತ್ತಿಕೊಂಡು ಹೋಗುವ ಎರಡೂ ಕಡೆಯ ತಡೆ ಬೇಲಿ ತುಕ್ಕು ಹಿಡಿದು ಬಿದ್ದುಹೋಗಿದೆ.

ಆರಂಭದಲ್ಲಿ ಕೆಲವು ಕಡೆಗಳಲ್ಲಿ ಮಾತ್ರ ಹೋಗಿತ್ತು, ಈಗ ಭಾಗಶಃ ತುಕ್ಕು ಹಿಡಿದು ಹೋಗಿದ್ದು ನಡೆದುಕೊಂಡು ಹೋಗುವವರಿಗೆ ಅಪಾಯ ಉಂಟಾಗಿದೆ.

ಇದರಿಂದಾಗಿ ಶಾಲಾ ಮಕ್ಕಳಿಗೆ ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಸಣ್ಣ ಮಕ್ಕಳು ಮಕ್ಕಳಾಟ ಮಾಡಿಕೊಂಡು ಹೋಗುವಾಗ ಬದಿಗೆ ಸರಿದರೂ ಬೀಳುವ ಅಪಾಯವಿದ್ದು, ಅಪಾಯ ಸಂಭವಿಸುವ ಮುನ್ನ ಎರಡೂ ಬದಿಯೂ ತಡೆ ಬೇಲಿ ಮಾಡಿ ಸಂಭಾವ್ಯ ಅಪಾಯವನ್ನು ತಪ್ಪಿಸಿಕೊಳ್ಳಬೇಕು.

ದೊಡ್ಡೇರಿ ಭಾಗದ ಸುಮಾರು 60 ಮನೆಗಳಿಗೆ ಸಂಪರ್ಕ ಕಲ್ಪಿಸುವ ಈ ಪ್ರಮುಖ ಸೇತುವೆಯನ್ನು ಸ್ಥಳೀಯ ಆಡಳಿತ ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದರೆ ಸೇತುವೆ ಶಿಥಿಲಗೊಂಡು ಅಪಾಯ ಖಂಡಿತ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.