ಕಲ್ಲುಗುಂಡಿ ಚರ್ಚ್ ನಲ್ಲಿ ಪರಿಸರ ದಿನಾಚರಣೆ

0

ಸಂಪಾಜೆ ಕಲ್ಲುಗುಂಡಿ ಸಂತ‌‌ ಫ್ರಾನ್ಸಿಸ್ ಕ್ಸೇವಿಯರ್ ಚರ್ಚಿನಲ್ಲಿ ಪರಿಸರ ದಿನಾಚರಣೆಯನ್ನು ಚರ್ಚಿನ ಪರಿಸರ ಅಯೋಗದ ನಾಯಕತ್ವದಲ್ಲಿ ರವಿವಾರ ದಿನಾಂಕ 30-06-2024 ರಂದು ಆಚರಿಸಲಾಯಿತು. ಧರ್ಮಗುರುಗಳಾದ ಫಾ. ಪಾವ್ಲ್ ಕ್ರಾಸ್ತ ರವರು ಫಲ ಕೊಡುವ ಗಿಡಗಳನ್ನು ನೆಡುವುದರ ಮುಖಾಂತರ ಚಾಲನೆ ನೀಡಿ, ಪರಿಸರ ರಕ್ಷಣೆಯ ಅಗತ್ಯತೆ ಹಾಗೂ ಸ್ವಚ್ಛ ಪರಿಸದಿಂದ ನಮಗೆ ಸಿಗುವ ಉಪಯೋಗಗಳ ಬಗ್ಗೆ ತಿಳಿಸಿದರು. ಚರ್ಚಿನ ಪಾಲಾನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಸಿಲ್ವೆಸ್ಟರ್ ಡಿಸೋಜಾ, ಕಾರ್ಯದರ್ಶಿ ಶ್ರೀಮತಿ ಕಾರ್ಮಿಣ್ ಡಿಸೋಜ, ಪರಿಸರ ಅಯೋಗದ ಸಂಚಾಲಕರಾದ ಶ್ರೀ ಸಂತೋಷ್ ಕ್ರಾಸ್ತ, ಪಾಲಾನಾ ಮಂಡಳಿಯ ಸದಸ್ಯರು ಹಾಗೂ ಚರ್ಚಿನ ಸರ್ವ ಸದಸ್ಯರು ಭಾಗವಹಿಸಿದರು. ಶ್ರೀಮತಿ ಎವ್ಲಿನ್ ಡಿಸೋಜರವರು‌ ಕಾರ್ಯವನ್ನು ನಿರೂಪಿಸಿದರು.