ರೋಗಿಗಳ ಆರೋಗ್ಯ ವಿಚಾರಿಸಿ ಆರೋಗ್ಯ ಅಧಿಕಾರಿಗಳೊಂದಿಗೆ ಸಮಾಲೋಚನೆ
ಇಂದು ಸುಳ್ಯಕ್ಕೆ ಆಗಮಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರವರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿ ವೀಕ್ಷಣೆ ನಡೆಸಿದ್ದಾರೆ.
ಡಯಾಲಿಸಿಸ್ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಸಂದರ್ಶಿಸಿದ ಸಚಿವರು ಅವರ ಆರೋಗ್ಯವನ್ನು ವಿಚಾರಿಸಿ ಆಸ್ಪತ್ರೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿದುಕೊಂಡರು.
ಬಳಿಕ ಸುಳ್ಯ ಅರೋಗ್ಯಾಧಿಕಾರಿ, ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಆಸ್ಪತ್ರೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ವೇಳೆ ಸುಳ್ಯ ಪತ್ರಕರ್ತರು ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರ ಕೊರತೆ, ಮತ್ತು ಟೆಕ್ನಿಸನ್ ಗಳ ಕೊರತೆಯ ಬಗ್ಗೆ ಕೇಳಿದ ಸಂದರ್ಭ ಅರೋಗ್ಯಾಧಿಕಾರಿಗಳಲ್ಲಿ ಸಚಿವರು ಕೇಳಿದಾಗ ಕೊರತೆ ಇರುವ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು ಶೀಘ್ರವಾಗಿ ಎಕ್ಸರೇ ವಿಭಾಗಕ್ಕೆ ಓರ್ವ ಟೆಕ್ನೀಷನ್‌ನ್ನು ಭರ್ತಿ ಮಾಡಿಕೊಳ್ಳುವಂತೆ ಹೇಳಿದರು. ಬಳಿಕ ಹೆರಿಗೆ ತಜ್ಞೆ ವೀಣಾರವರ ಬಗ್ಗೆ ಎಂ.ವೆಂಕಪ್ಪ ಗೌಡರು ಸಚಿವರಿಗೆ ಮಾಹಿತಿ ನೀಡಿದಾಗ, ಸಚಿವರು ಡಾ. ಕರುಣಾಕರರವರ ಬಳಿ ವೀಣಾರವರ ತಪ್ಪುಗಳು ಏನಾದರೂ ಇದೆಯಾ ಎಂದು ಕೇಳಿದರು. ಆ ರೀತಿಯ ಸಮಸ್ಯೆಗಳು ಏನು ಅವರಿಂದ ಆಗಿಲ್ಲವೆಂದು ಅವರು ಸ್ಪಷ್ಟನೆ ನೀಡಿದರು. ಅವರೇ ಬರಲು ಒಪ್ಪುತ್ತಿಲ್ಲ ಎಂದು ಹೇಳಿದರು.
ಆಗ ಸಚಿವರು ಡಾ.ವೀಣಾರವರನ್ನೇ ಮತ್ತೆ ಬರುವಂತೆ ಅವರ ಮನವೊಲಿಸಿ ಕರೆಸಿಕೊಳ್ಳಲು ಪ್ರಯತ್ನಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅರೋಗ್ಯಾಧಿಕಾರಿ, ಸುಳ್ಯ ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್ ಮೊದಲಾದವರು ಉಪಸ್ಥಿತರಿದ್ದರು.