ಬಾಲಣ್ಣ ಪಾಂಬಾರ್ ನಿಧನ

0

ಚೆಂಬು ಗ್ರಾಮದ ಊರುಬೈಲ್ ಬಳಿಯ ಪಾಂಬಾರ್ ಬಾಲಣ್ಣರವರು ಅಲ್ಪ ಕಾಲದ ಅನಾರೋಗ್ಯದಿಂದ ಜುಲೈ 10 ರಂದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 72 ವರ್ಷ ವಯಸ್ಸಾಗಿತ್ತು.


ಕೆಲ ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಇವರು ಪತ್ನಿ ರತ್ನಾವತಿ, ಪುತ್ರರಾದ ಶಿವಪ್ರಸಾದ್, ದಯಾನಂದ, ಪುತ್ರಿಯರಾದ ಸವಿತಾ, ಲೀಲಾವತಿ, ಸುನೀತಾ, ಅನಿತಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.