ಮಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸುಳ್ಯದಲ್ಲಿ ಶಾಖೆಯನ್ನು ಹೊಂದಿರುವ ಪ್ರಣವ ಸೌಹಾರ್ದ ಸಹಕಾರಿ ಸಂಘ ಇದರ 8ನೇ ಶಾಖೆ ಕುಶಾಲನಗರದಲ್ಲಿ ಆರಂಭಗೊಳ್ಳಲಿದ್ದು, ಇದರ ಉದ್ಘಾಟನಾ ಸಮಾರಂಭವು ಜು. 12 ರಂದು ಬೆಳಗ್ಗೆ 11.45ಕ್ಕೆ ಕುಶಾಲನಗರದ ಬಿ.ಎಂ. ರಸ್ತೆಯಲ್ಲಿರುವ ಪ್ರಥಮ ಮಹಡಿಯ ಗ್ರ್ಯಾಂಡ್ ಸೆಂಟ್ರಲ್ ಬಿಲ್ಡಿಂಗ್‌ನಲ್ಲಿ ನಡೆಯಲಿರುವುದು.
ಒಡಿಯೂರು ಶ್ರೀ ಗುರು ದೇವದತ್ತ ಸಂಸ್ಥಾನಮ್‌ನ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಪ್ರಣವ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಜಿ.ಆರ್. ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಡಿಕೇರಿ ಶಾಸಕ ಡಾ. ಮಂಥರ್ ಗೌಡ, ಸಾಮಾಜಿಕ ಕಾರ್ಯಕರ್ತ ಹಾಗೂ ಜಿ.ಪಂ. ಮಾಜಿ ಸದಸ್ಯ ಭಾರತೀಶ್ ಬಿ.ಬಿ., ಮೈಸೂರು ಜಿಲ್ಲಾ ಸಾಂಸ್ಕೃತಿಕ ಸಮಿತಿ, ಧ್ವನಿ ಫೌಂಡೇಶನ್ ಅಧ್ಯಕ್ಷೆ ಡಾ| ಶ್ವೇತಾ ಮಡಪ್ಪಾಡಿ, ಕುಶಾಲನಗರ ನಳಂದ ಇಂಟರ್ ನ್ಯಾಷನಲ್ ಸ್ಕೂಲ್ ನಿರ್ದೇಶಕ ನಾಮ್ಗೇಲ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕರಾದ ಎಸ್.ಕೆ. ಮಂಜುನಾಥ್, ಶ್ರೀಮತಿ ಭಾರತಿ ಜಿ. ಭಟ್, ಮೈಸೂರು, ಮಂಡ್ಯ, ಮಡಿಕೇರಿ ಸೌಹಾರ್ದ ಸಹಕಾರಿ ಒಕ್ಕೂಟ ಅಧ್ಯಕ್ಷ ನಾರಾಯಣ ರಾವ್ ಎಸ್. ಆರ್., ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಹಿರಿಯ ಅಧಿಕಾರಿ ವಿಜಯ್ ಉಪಸ್ಥಿತರಿರುವರು ಎಂದು ಆಡಳಿತ ಮಂಡಳಿ ತಿಳಿಸಿದೆ.
ಬೆಳಿಗ್ಗೆ ಗಣಹೋಮ ಮತ್ತು ಲಕ್ಷ್ಮಿಪೂಜೆ ನಡೆದ ಬಳಿಕ ನಟರಾಜ ನೃತ್ಯ ನಿಕೇತನ (ರಿ.), ಕಲ್ಲುಗುಂಡಿ, ಸಂಪಾಜೆ, ದ.ಕ., ಅರಂತೋಡು ಮತ್ತು ಸುಳ್ಯ ಶಾಖೆಯ ಶಿಷ್ಯ ವೃಂದದವರಿಂದ ವಿದುಷಿ ಇಂದುಮತಿ ನಾಗೇಶ್ ಎಕ್ಕೂರು, ಮಂಗಳೂರು ಇವರ ನಿರ್ದೇಶನದಲ್ಲಿ ಜಾನಪದ ನೃತ್ಯ ವೈಭವ ನಡೆಯಲಿದೆ.