ಪಡ್ಡಂಬೈಲು ಕರ್ಲಪ್ಪಾಡಿ ಕುಡೆಂಬಿ ಎಸ್ ಟಿ ಕಾಲೋನಿ ರಸ್ತೆಗೆ ಇನ್ನೂ ಸಿಗದ ಮುಕ್ತಿ

0

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಪಡ್ಡಂಬೈಲು ಕರ್ಲಪ್ಪಾಡಿ ಕುಡೆಂಬಿ ಎಸ್ ಟಿ ಕಾಲೋನಿಗೆ ತೆರಳುವ ರಸ್ತೆಯು ಇಂದಿಗು ನಾ ದುರಸ್ತಿಯಲ್ಲಿದ್ದು ಅನುದಾನ ಬಂದಾಗ ಇತರೆ ಸ್ಥಳಗಳಿಗೆ ವರ್ಗಾಯಿಸಿ ಈ ರಸ್ತೆಯು ಸ್ವಾತಂತ್ರ್ಯ ನಂತರದಿಂದ ಒಮ್ಮೆಯು ಡಾಮರೀಕರಣ ಅಥಾವ ಕಾಂಕ್ರೀಟ್ ಕಂಡಿಲ್ಲ.

ಕಳೆದ ಹಲವಾರು ವರ್ಷಗಳ ಹಿಂದೆ ಮಾಜಿ ಸಚಿವ ಶಾಸಕರಾದ ಎಸ್ ಅಂಗಾರರವರು ಸ್ಥಳಕ್ಕೆ ಭೇಟಿ ನೀಡಿ ರಸ್ತೆಗೆ ಡಾಮರೀಕರಣ ನಡೆಸಲು ಅನುದಾನ ನೀಡುವುದಾಗಿ ತಿಳಿಸಿ ಜನರ ಸಮಸ್ಯೆಗಳನ್ನು ಆಲಿಸಿ ತೆರಳಿದ್ದರು ಆದರೆ ಅನುದಾನ ಬರುವ ಸಂದರ್ಭದಲ್ಲಿ ಕೆಲ ವ್ಯಕ್ತಿಗಳು ತಮ್ಮ ಮನೆಯ ಬಳಿಯ ವರೆಗರ ರಸ್ತೆ ನಿರ್ಮಿಸಲು ಸುಮಾರು 80 ಲಕ್ಷ ಅನುಧಾನವನ್ನು ಮೂರು ತುಂಡುಗಳಾಗಿಸಿ ಇನ್ನೊಂದೆಡೆಗೆ ವರ್ಗಾಯಿಸಿ ಮತ್ತೆ ಈ ರಸ್ತೆಗೆ ಯಾವುದೇ ಅನುಧಾನವಿಲ್ಲದ ರೀತಿಯಲ್ಲಿ ಮಾಡಿದ್ದು ಪ್ರತಿ ಮಳೆಗಾಲ ಸಂದರ್ಭದಲ್ಲಿ ರಸ್ತೆಯಲ್ಲಿ ಒರತೆ ನೀರುಗಳು ಬರುತ್ತಿದ್ದು ನಿತ್ಯ ದ್ವಿಚಕ್ರ ಮತ್ತು ತ್ರಿಚಕ್ರ , ನಾಲ್ಕು ಚಕ್ರದ ವಾಹನಗಳು ಸಂಚರಿಸಲು ತೊಂದರೆ ಉಂಟಾಗುತ್ತಿದ್ದು ಮಳೆಗಾಲಕ್ಕೆ ಅಹಾರ ಪದಾರ್ಥಗಳನ್ನು ಸುಮಾರುವಮಳೆಗಾಲು ಮುಗಿಯುವ ತನಕ ಶೇಖರಿಸಿ ಇಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಅಲ್ಲದೇ ಕೆಲ ಮನೆಗಳು ದ್ವೀಪದ ರೀತಿಯಲ್ಲಾಗಿದ್ದು ಯಾವುದೇ ತುರ್ತು ಸಂದರ್ಭ ಬಂದರು ತೆರಳುವುದು ಅಸಾಧ್ಯವಾಗಿದೆ.

ಇತ್ತ ಜನರ ನಿತ್ಯ ದೂರಿನ ಹಿನ್ನಲೆಯಲ್ಲಿ ಕಳೆದ ಮಳೆಗಾಲದಲ್ಲಿ ತುರ್ತು ವಾಹನ ರಸ್ತೆಯಲ್ಲಿ ಬಾಕಿಯಾದ ಹಿನ್ನಲೆಯಲ್ಲಿ ಗ್ರಾ.ಪಂ ನಿಂದ ಸತ್ಯವತಿ ಬಸವನಪಾದೆ ಸುಮಾರು ಹತ್ತು ಸಾವಿರ ರೂಪಾಯಿಗಳನ್ನು ನೀಡಿ ಮತ್ತು ಸಾರ್ವಜನಿಕರೆ ತಮ್ಮ ಹಣವನ್ನು ಇದರ ಜೊತೆಗೆ ಸೇರಿಸಿ ಒಂದು ಲೋಡ್ ಜಲ್ಲಿ ಮತ್ತು ಜೆಸಿಬಿ ಯಂತ್ರದ ಮೂಲಕ ತಾತ್ಕಾಲಿಕ ದುರಸ್ತಿಯನ್ನು ಪಡಿಸಲಾಗಿತ್ತು ಆದರೆ ಈ ಅನುದಾನವನ್ನು ಹೊರತು ಪಡಿಸಿದರೆ ಇಲ್ಲಿಯ ತನಕ ಒಂದೇ ಒಂದು ರೂಪಾಯಿಗಳ ಅನುದಾನವನ್ನು ನೀಡದೇ ಇದ್ದು ಇದೀಗ ಜನತೆ ತ್ರಿಶಂಕು ಪರಿಸ್ಥಿತಿ ಎದುರಿಸುವಂತಾಗಿದ್ದು ಸುಳ್ಯದಲ್ಲಿ ನಡೆದ ಜಿಲ್ಲಾ ಜನಸಂಪರ್ಕ ಸಭೆಯಲ್ಲಿ ಇದೆ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಮನವಿ ಸಲ್ಲಿಸಲಾಗಿತ್ತು ಆದರೆ ಇನ್ನು ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲವಾಗಿದ್ದು ಇನ್ನಾದರು ಎಚ್ಚೆತ್ತು ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವರೇ ಎಂದು ಕಾದು ನೋಡಬೇಕಿದೆ.