ನೀರಿನ ಮೂಲ ಇರುವವರಿಗೆ ಕುಡಿಯುವ ನೀರಿನ ಪೈಪ್ ಅಳವಡಿಕೆ ಬಗ್ಗೆ ಚರ್ಚೆ
ಮಧ್ಯಾಹ್ನ ಭೋಜನದ ಬಳಿಕ ಸಂಜೆವರೆಗೆ ನಡೆದ ಗ್ರಾಮ ಸಭೆ
ಬಾಳಿಲ ಗ್ರಾಮ ಪಂಚಾಯತ್ ನ 2024 – 25 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪಾವನ ಜೋಗಿಬೆಟ್ಟುರವರ ಅಧ್ಯಕ್ಷತೆಯಲ್ಲಿ ಜು.11 ರಂದು ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಿತು. ಪಂಚಾಯತ್ ಕಾರ್ಯದರ್ಶಿ ಜಯಶೀಲ ರೈ ವರದಿ ಮಂಡಿಸಿದರು.
ತಾಲೂಕು ಪಂಚಾಯತ್ ಪಿ.ಎಂ.ಪೋಷಣ್ ಸಹಾಯಕ ನಿರ್ದೇಶಕರಾದ ಶ್ರೀಮತಿ ವೀಣಾ ರವರು ನೋಡೆಲ್ ಅಧಿಕಾರಿಯಾಗಿದ್ದರು.
ವಿದ್ಯುತ್,ಕುಡಿಯುವ ನೀರು,ರಸ್ತೆ ,ಚರಂಡಿ ವ್ಯವಸ್ಥೆ ,ಕಾಮಗಾರಿಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಕಾಂಚೋಡು ಎಂಬಲ್ಲಿ ಕುಡಿಯುವ ನೀರಿನ ಮೂಲ ಇರುವವರಿಗೆ ಪಂಚಾಯತ್ ನಿಂದ ನೀರಿನ ಪೈಪ್ ಅಳವಡಿಕೆ ಬಗ್ಗೆ ಕೆಲಹೊತ್ತು ಚರ್ಚೆಗಳು ನಡೆದವು.
ಬೆಳಿಗ್ಗೆ ಪ್ರಾರಂಭವಾದ ಗ್ರಾಮ ಸಭೆ ಮಧ್ಯಾಹ್ನವರೆಗೆ ಮುಗಿಯಲಿಲ್ಲ.ಆಗ ಗ್ರಾಮಸ್ಥರ ಅಭಿಪ್ರಾಯ ಮತ್ತು ಆಡಳಿತ ಮಂಡಳಿಯ ನಿರ್ಣಯದಂತೆ ಊಟ ಮಾಡಿ ಬಳಿಕ ಗ್ರಾಮ ಸಭೆ ಮುಂದುವರಿಸುವುದೆಂದು ನಿರ್ಣಯಿಸಲಾಯಿತು.
ಬಳಿಕ ಊಟಕ್ಕೆ ಸ್ವಲ್ಪ ಹೊತ್ತು ವಿರಾಮ ನೀಡಲಾಯಿತು. ಪಂಚಾಯತ್ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟ ಆದ ಬಳಿಕ ಪುನ: ಗ್ರಾಮ ಸಭೆ ಸಂಜೆಯವರೆಗೆ ಮುಂದುವರಿಯಿತು. ಇಲಾಖಾಧಿಕಾರಿಗಳು ಮಾಹಿತಿ ನೀಡಿದರು. ನಂತರ ಇತರ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಿತು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಮೇಶ್ ರೈ ಅಗಲ್ಪಾಡಿ ಮತ್ತು ಸದಸ್ಯರು ಉಪಸ್ಥಿತರಿದ್ದರು. ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಪಿಡಿಒ ಹೂವಪ್ಪ ಗೌಡರವರು ಸ್ವಾಗತಿಸಿ,ಮಧುರ ಟಿ.ಪ್ರಾರ್ಥಿಸಿದರು.