ಅಮರಮುಡ್ನೂರು ಗ್ರಾಮದಲ್ಲಿ ವಿಪರೀತ ಸೊಳ್ಳೆ ಕಾಟ

0

ಅಮರಮುಡ್ನೂರು ಗ್ರಾಮದ ಪದವು ಎಂಬಲ್ಲಿ ವಿಪರೀತ ಸೊಳ್ಳೆ ಕಾಟದಿಂದ ಜೀವನ ನಡೆಸುವುದೇ ಬಹಳ ಚಿಂತೆಯಾಗಿದೆ.


ಸಂಜೆಯಾಗುತ್ತಲೇ ಗುಂಯಿ ಗುಟ್ಟುತ್ತಾ ಬರುವ ಸೊಳ್ಳೆಗಳಿಂದ ಈ ಪರಿಸರದಲ್ಲಿ ಇರುವ ನಿವಾಸಿಗಳು ಹೈರಾಣಾರಾಗಿದ್ದಾರೆ.

ರಾತ್ರಿ ವೇಳೆಯಲ್ಲಿ ವಿದ್ಯುತ್ ಕೈ ಕೊಟ್ಟರಂತೂ ಪರಿಸ್ಥಿತಿ ಹೇಳತೀರದು ಎನ್ನುತ್ತಾರೆ ಇಲ್ಲಿನ ವಾಸಿಗಳು. ಇಲ್ಲಿ ಪ್ರತಿಷ್ಠಿತ ಭಗವಾನ್ ಸತ್ಯಸಾಯಿ ವಿದ್ಯಾ ಕೇಂದ್ರವಿದ್ದು ನೂರಾರು ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಪರ ಊರಿನಿಂದ ಬಂದು ಹಾಸ್ಟೆಲ್ ನಲ್ಲಿದ್ದಾರೆ. ಇಷ್ಟಾದರೂ ಯಾವುದೇ ಇಲಾಖೆಯವರು ಗಮನ ಹರಿಸುತ್ತಿಲ್ಲ.

ಸೊಳ್ಳೆಯಿಂದಲೇ ಹರಡುವ ಮಾರಕ ಕಾಯಿಲೆ ಡೆಂಗ್ಯೂ ಬಗ್ಗೆ ಬೊಬ್ಬಿಡುವುದಲ್ಲದೆ ಸೊಳ್ಳೆ ನಿಯಂತ್ರಣಕ್ಕೆ ಯಾವುದೇ ಅಧಿಕಾರಿಗಳು ಗಮನ ಹರಿಸದಿರುವುದು ಪಶ್ಚಾತ್ತಾಪ ಪಡುವಂತಾಗಿದೆ. ಇಡೀ ಗ್ರಾಮಕ್ಕೆ ಮಾರಕ ಕಾಯಿಲೆ ಹರಡಿ ಜನ ಸಾವಿಗೀಡಾಗುವುದಕ್ಕೆ ಮೊದಲು ಬಂದು ನಿಯಂತ್ರಣಕ್ಕೆ ಮುಂದಾಗಬೇಕಲ್ಲವೆ ಎಂಬುದು ಗ್ರಾಮದ ಜನರ ಪ್ರಶ್ನೆಯಾಗಿದೆ.