ಸುಳ್ಯ- ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆಯ ಕಮಿಲಡ್ಕದಿಂದ ಕುದ್ಪಾಜೆವರೆಗೆ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಆರಂಭ

0

ಸುಳ್ಯ- ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆಯ ಕಮಿಲಡ್ಕದಿಂದ ಕುದ್ಪಾಜೆವರೆಗೆ ರಸ್ತೆ ಕಾಂಕ್ರೀಟೀಕಣ ಕಾಮಗಾರಿ ಆರಂಭಗೊಂಡಿದ್ದು, ವಾಹನ ಸಂಚಾರ ನಿಷೇಧಿಸಲಾಗಿದೆ.


ಪ್ರಮುಖ ಬೇಡಿಕೆಯ ರಸ್ತೆಗಳಲ್ಲಿ ಒಂದಾದ ಸುಳ್ಯ – ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆಯು ಸಮಗ್ರ ಅಭಿವೃದ್ಧಿಯಾಗಬೇಕೆಂಬುದು ಆ ಭಾಗದ ನಾಗರಿಕರ ಬಹು ವರ್ಷಗಳ ಬೇಡಿಕೆಯಾಗಿದೆ. ಸುಳ್ಯದಿಂದ ಸುಬ್ರಹ್ಮಣ್ಯ ರಸ್ತೆಯನ್ನು ಸಂಪರ್ಕಿಸುವ ಅತೀ ಕಡಿಮೆ ಅಂತರದ ರಸ್ತೆ ಇದಾಗಿದ್ದು ಸಮಗ್ರ ಅಭಿವೃದ್ಧಿಗಾಗಿ ಹಲವಾರು ಮನವಿ, ಪ್ರತಿಭಟನೆ ನಡೆದಿದೆ.


ರಸ್ತೆಯ ಅಲ್ಲಲ್ಲಿ ಕಾಂಕ್ರೀಟೀಕರಣವಾಗಿದ್ದು ತೀರಾ ಹದಗೆಟ್ಟು ಸಂಚಾರಕ್ಕೆ ಅಸಾಧ್ಯವಾಗಿದ್ದ ಕಮಿಲಡ್ಕದಿಂದ ಕುದ್ಪಾಜೆವರೆಗಿನ 850ಮೀ.ರಸ್ತೆಯ ಕಾಮಗಾರಿ ಇದೀಗ ಆರಂಭಗೊಂಡಿದೆ.


ಕಾಂಕ್ರೀಟೀಕರಣ ಕಾಮಗಾರಿಗಾಗಿ ಆ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

850 ಮೀಟರ್ ರಸ್ತೆ ಕಾಂಕ್ರೀಟೀಕರಣವಾಗಲಿದ್ದು, ಶಾಸಕರ ನಿಧಿಯಿಂದ 10ಲಕ್ಷ, ಸಂಸದರ ನಿಧಿಯಿಂದ 10ಲಕ್ಷ ಅನುದಾನವಿದ್ದು, ಇನ್ನೂ 45ಲಕ್ಷ ರೂ.ಅನುದಾನ ಬೇಕಾಗುತ್ತದೆ ಎಂದು ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಉಬರಡ್ಕ ತಿಳಿಸಿದ್ದಾರೆ.