ಮೊರಂಗಲ್ಲು ನೂತನ ತರವಾಡು ಮನೆಯ ನಿರ್ಮಾಣಕ್ಕೆ ಶಿಲಾನ್ಯಾಸ ಪೂಜೆ

0

ಆಲೆಟ್ಟಿಯ ಮೊರಂಗಲ್ಲು ಮನೆತನದ ನೂತನ ತರವಾಡು ಮನೆಯ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಜು.13 ರಂದು ಮೊರಂಗಲ್ಲಿನಲ್ಲಿ ನಡೆಯಿತು.
ಕುಂಟಾರು ಕ್ಷೇತ್ರದ ರವೀಶ ತಂತ್ರಿವರ್ಯರ ಮಾರ್ಗದರ್ಶನದಲ್ಲಿ ಶಿಲಾನ್ಯಾಸ ಪೂಜೆಯು ನೆರವೇರಿತು.

ಈ ಸಂದರ್ಭದಲ್ಲಿ ಮೊರಂಗಲ್ಲು ಶ್ರೀ ಧೂಮಾವತಿ ಸಪರಿವಾರ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಗುರುಪ್ರಸಾದ್ ರೈ ಮೊರಂಗಲ್ಲು ಹಾಗೂ ಮೊರಂಗಲ್ಲು ಕುಟುಂಬಸ್ಥರು, ಮೊರಂಗಲ್ಲು ಬೈಲಿನವರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.