ಕೆಲಸ ಮಾಡುತ್ತಿದ್ದ ವೇಳೆ ಬರೆ ಜರಿದು ಕಲ್ಲು ತಾಗಿ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ಜು. 15ರಂದು ದ.ಕ. ಸಂಪಾಜೆ ಗ್ರಾಮದಗೂನಡ್ಕದ ಪೆಲ್ತಡ್ಕದಲ್ಲಿ ಸಂಭವಿಸಿದೆ.
ಗೂನಡ್ಕದ ಪೆಲ್ತಡ್ಕ ನಿವಾಸಿ ಪದ್ಮನಾಭ ಎಸ್. ಪಿ. ಎಂಬವರು ಕೆಲಸ ಮಾಡುತ್ತಿದ್ದ ವೇಳೆ ದಿಡೀರ್ ಬರೆ ಜರಿತ ಆಗಿದ್ದು, ಕಲ್ಲು ಪದ್ಮನಾಭ ಅವರ ತಲೆಗೆ ತಾಗಿದ್ದು, ಅವರನ್ನು ಸ್ಥಳೀಯರು ಸೇರಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತಂದು ದಾಖಲಿಸಿ, ಚಿಕಿತ್ಸೆ ಕೊಡಿಸಿದರೆಂದು ತಿಳಿದುಬಂದಿದೆ.