ಪಾಟಾಜೆ ಸ.ಕಿ.ಪ್ರಾ.ಶಾಲೆ ಯಲ್ಲಿ ಅಕ್ಷರ ದಾಸೋಹದ ಮುಖ್ಯ ಅಡುಗೆಯವರಿಗೆ ಬೀಳ್ಕೊಡುಗೆ

0

ಶಾಲಾ ಗ್ರಂಥಾಲಯಕ್ಕೆ ಗೋದ್ರೇಜ್ ಕೊಡುಗೆ ನೀಡಿದ ಶಿಕ್ಷಕಿ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಾಟಾಜೆಯಲ್ಲಿ ಅಕ್ಷರ ದಾಸೋಹದ ಮುಖ್ಯ ಅಡುಗೆಯವರಾಗಿ ಶ್ರೀಮತಿ ಸುಶೀಲ ಇವರು ಸತತ 22 ವರ್ಷಗಳಿಂದ ಸೇವೆ ಸಲ್ಲಿಸಿದ್ದು, ಈ ವರ್ಷದಲ್ಲಿ ಅವರು ಸೇವಾ ನಿವೃತ್ತಿ ಹೊಂದಿದ್ದಾರೆ. ಅವರನ್ನು ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಿ ಅಭಿನಂದಿಸಿ ಬೀಳ್ಕೊಡಲಾಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಅವರಿಗೆ ಸ್ಮರಣಿಕೆ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರಾದ ವಿಠಲ್ ದಾಸ್ ಬೆಳ್ಳಾರೆ, ಶೇಷಪ್ಪ ಪೂಜಾರಿ ದಾಸನಮಜಲು, ಪ್ರಕಾಶ್ ದಾಸನಮಜಲು,ಇದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ಪುತ್ತೂರು ತಾಲೂಕಿಗೆ ವರ್ಗಾವಣೆ ಗೊಂಡಿರುವ ಶಿಕ್ಷಕಿ ಶ್ರೀಮತಿ ಸ್ವರ್ಣಲತಾ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸುಮತಿ,ಮತ್ತು ಉಪಾಧ್ಯಕ್ಷರು ಮತ್ತು ಸದಸ್ಯರು, ಮುಖ್ಯೋಪಾಧ್ಯಾಯರಾದ ಶ್ರೀಮತಿ ತಂಗಮ್ಮ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವಾರಿಜಾ, ಅತಿಥಿ ಶಿಕ್ಷಕಿ ಶ್ರೀಮತಿ ಜ್ಯೋತಿ, ಎಲ್ಲಾ ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ಶಾಲೆಗೆ ಗೋದ್ರೆಜ್ ಕೊಡುಗೆ ನೀಡಿದ ಶಿಕ್ಷಕಿ
ಇದೇ ವೇಳೆ ಈ ಮೊದಲು ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಪುತ್ತೂರು ತಾಲೂಕಿಗೆ ವರ್ಗಾವಣೆ ಗೊಂಡಿರುವ ಶ್ರೀಮತಿ ಸ್ವರ್ಣಲತಾ ರಾಧಾಕೃಷ್ಣ ಇವರು ವಿದ್ಯಾರ್ಥಿಗಳ ಗ್ರಂಥಾಲಯದ ಪುಸ್ತಕಗಳ ಸದ್ಭಳಕೆಗಾಗಿ ಗೋದ್ರೇಜ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ. ಶಾಲೆಯ ಮೇಲಿನ ಅಭಿಮಾನ ಹಾಗೂ ಮಕ್ಕಳ ಮೇಲಿನ ಪ್ರೀತಿಯಿಂದ ಕೊಡುಗೆ ನೀಡಿದ ಅವರಿಗೆ ಶಾಲೆಯ ಸಿಬ್ಬಂದಿ ವರ್ಗ, ಶಾಲಾ ಮೇಲುಸ್ತುವಾರಿ ಸಮಿತಿ, ಮಕ್ಕಳ ಪೋಷಕರು ಹಾಗೂ ಎಲ್ಲಾ ಮಕ್ಕಳ ಪರವಾಗಿ ಮುಖ್ಯೋಪಾಧ್ಯಾಯರಾದ ಶ್ರೀಮತಿ ತಂಗಮ್ಮ ಅವರು ಧನ್ಯವಾದಗಳನ್ನು ಸಲ್ಲಿಸಿದರು.