ಗೊಂದಲಕ್ಕೀಡಾಗುವ ಆಟಿಕೆ ನೋಟನ್ನು ತಡೆಹಿಡಿಯುವಂತೆ ಒತ್ತಾಯ
ಮಾರುಕಟ್ಟೆಯಲ್ಲಿ ಮಕ್ಕಳ ಆಟಿಕೆಯಲ್ಲಿ ಸಿಗುವ ರೂ.200ರಂತೆ ಹೋಲುವ ನೋಟುಗಳಿಂದ ವ್ಯಾಪಾರಸ್ಥರಲ್ಲಿ ಮತ್ತು ಗ್ರಾಹಕರಲ್ಲಿ ಗೊಂದಲ ಏರ್ಪಟ್ಟಿದೆ.
ರೂ.200ರ ನೋಟನ್ನೇ ಹೋಲುವಂತೆ ಮುದ್ರಿಸಿರುವ ಮಕ್ಕಳ ಆಟದ ನೋಟಲ್ಲಿ ಕೆಲವೊಂದು ಬದಲಾವಣೆಗಳಿದ್ದರೂ ಒರಿಜಿನಲ್ ನೋಟಿನ ಕಲರ್ ಸೇರಿದಂತೆ ಬಹುತೇಕ ಒಂದೇ ರೀತಿಯಂತಿದೆ. ಹೀಗಾಗಿ ಮಕ್ಕಳ ಆಟಿಕೆಯ 200ರ ನೋಟು ಎಂಬುದು ಕೆಲವರ ಗಮನಕ್ಕೆ ಬಾರದೇ ಅಂಗಡಿಗಳಲ್ಲಿ ಚಲಾವಣೆಯಾಗತೊಡಗಿದೆ. ಹೀಗಾಗಿ ಇಂತಹ ಆಟಿಕೆ ನೋಟುಗಳನ್ನು ತಡೆಹಿಡಿದು ಜನರು ಮೋಸಹೋಗದಂತೆ ಮಾಡಬೇಕೆಂದು ವ್ಯಾಪಾರಸ್ಥರು ಮತ್ತು ಗ್ರಾಹಕರು ಒತ್ತಾಯಿಸಿದ್ದಾರೆ.