ಯುವಕನೊಬ್ಬನಿಗೆ ಇನ್ ಸ್ಟಾಗ್ರಾಮ್ ಮೂಲಕ ಲಕ್ಷಾಂತರ ರೂ ವಂಚನೆ ಮಾಡಿದ ಘಟನೆ ನಡೆದಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ದಿಲ್‌ಸಾದ್ ಎಸ್ (24) ಎಂಬವರು ಪೊಲೀಸ್ ದೂರು ನೀಡಿದ್ದು ದೂರಿನಲ್ಲಿ ದಿನಾಂಕ 09.07.2024 ರಂದು ಸಂಜೆ ಮೊಬೈಲ್ ನಲ್ಲಿ ನಾನು Instagram ಉಪಯೋಗಿಸುತ್ತಿರುವಾಗ ಅದರಲ್ಲಿ Work of home without investment ಎಂದು ಲಿಂಕ್ ಇರುವ ವೀಡಿಯೋ ಬಂದಿದ್ದು, ಆ.ಲಿಂಕ್ ನ್ನು ಓಪನ್ ಮಾಡಿ, ಅದರಲ್ಲಿನ ಸೂಚನೆಗಳನ್ನು ಪಾಲಿಸಿದಾಗ, Anita Singh ಎಂಬ ಹೆಸರಿನ Telegram ID ಲಿಂಕ್ ಕಳುಹಿಸಿ ನನ್ನನ್ನು ಸೇರ್ಪಡೆಗೊಳಿಸಿರುತ್ತಾರೆ. ಬಳಿಕ ಅಪರಿಚಿತ ಆರೋಪಿಗಳು ವಿವಿಧ ಟಾಸ್ಕ್ ಗಳ ಹೆಸರಿನಲ್ಲಿ ಹಾಗೂ ಇತರೆ ಕಾರಣಗಳನ್ನು ಒಡ್ಡಿ Google Pay ಮುಖಾಂತರ ಹಂತ ಹಂತವಾಗಿ ಒಟ್ಟು ರೂ 2,74,000/- ಹಣವನ್ನು ಪಾವತಿಸಿಕೊಂಡು ನನಗೆ ವಂಚನೆ ಮಾಡಿರುತ್ತಾರೆ ಎಂಬುದಾಗಿ ಪೊಲೀಸ್ ದೂರು ನೀಡಿದ್ದು.
ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ, ಅಪರಾಧ ಕ್ರಮಾಂಕ : 64/2024, ಕಲಂ 318(4), 319(2) BNS ಮತ್ತು ಕಲಂ: 66(ಡಿ) ಐಟಿ ಆಕ್ಟ್ 2000 ರಂತೆ ಪ್ರಕರಣ ದಾಖಲಾಗಿರುತ್ತದೆ ಎಂದು ತಿಳಿದು ಬಂದಿದೆ.