ಸುಳ್ಯದಲ್ಲಿ ಅಪೋಲೋ ಫಾರ್ಮಸಿ ಶುಭಾರಂಭ

0

ಸುಳ್ಯದ ಶ್ರೀರಾಂ ಪೇಟೆಯ ಗೋಪಿಕಾ ಬಿಲ್ಡಿಂಗ್ ನಲ್ಲಿ ಅಪೋಲೋ ಹಾಸ್ಪಿಟಲ್ ಗ್ರೂಪ್ ನ ಅಪೋಲೋ ಫಾರ್ಮಸಿ ಇಂದು ಶುಭಾರಂಭಗೊಂಡಿತು.


ನೂತನ ಸಂಸ್ಥೆಯನ್ನು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ರೋ.ಯೋಗಿತಾ ಗೋಪಿನಾಥ್ ಉದ್ಘಾಟಿಸಿದರು.

ಗೋಪಿಕಾ ಬಿಲ್ಡಿಂಗ್ ನ ಮಾಲಕರಾದ ಎಂ.ಪಿ.ಗೋಪಿನಾಥ್, ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲರಾದ ಎಂ.ಬಿ.ಸದಾಶಿವ , ಪ್ರಣಾವ್ ಗೋಪಿನಾಥ್ ಉಪಸ್ಥಿತರಿದ್ದರು.

ಸಂಸ್ಥೆಯ ವತಿಯಿಂದ ಎಂ.ಪಿ.ಗೋಪಿನಾಥ್, ಯೋಗಿತಾ
ಗೋಪಿನಾಥ್ ಮತ್ತು ಎಂ‌.ಬಿ.ಸದಾಶಿವರನ್ನು ಸನ್ಮಾನಿಸಲಾಯಿತು.


ಸುಳ್ಯ ಸಂಸ್ಥೆ ಮೇಲ್ವಿಚಾರಕ ಪ್ರಭು ರವರು ನಿರ್ವಹಿಸಿದರು.
ಸಂಸ್ಥೆಯ ಪುತ್ತೂರು ಮತ್ತು ಸುಳ್ಯ ಶಾಖೆಯ ಸಿಬ್ಬಂದಿಗಳು, ಸ್ಥಳೀಯರು ಉಪಸ್ಥಿತರಿದ್ದರು.