ನೋಜಿ ಬಾಳ್ತಿಲ ವೃದ್ದಾಶ್ರಮದಲ್ಲಿ ಹಿರಿಯರನ್ನ ಗೌರವಿಸುವ ಸಮಾರಂಭ
ತಂದೆ ತಾಯಿ ತಮ್ಮ ಮಕ್ಕಳು ಒಳ್ಳೆಯದಾಗಬೇಕು, ಭವಿಷ್ಯದಲ್ಲಿ ಉಜ್ವಲ ಭವಿಷ್ಯವನ್ನು ಕಾಣಬೇಕು, ಸಮಾಜದಲ್ಲಿ ಉನ್ನತ ಸ್ಥಾನವನ್ನು ಗಳಿಸಬೇಕೆಂದು, ಆಶಿಸಿ ಅವರನ್ನು ಪೋಷಿಸಿ, ಸಾಕುತ್ತಾರೆ .ಆದರೆ ಕೆಲವು ಮಕ್ಕಳು ಹಿಂದಿನದನ್ನೆಲ್ಲ ಮರೆತು ತಂದೆ ತಾಯಿಯರನ್ನು ಗೌರವಿಸದೆ ಅವರನ್ನ ಮೂಲೆಗುಂಪು ಮಾಡುತ್ತಿರುವುದು ವಿಷಾದನೀಯ .ಮನುಷ್ಯರು ಮನುಷ್ಯರಂತೆ ವರ್ತಿಸಬೇಕು ವಿನಃ ಪ್ರಾಣಿಗಳಂತೆ ವರ್ತಿಸಬಾರದು. ಇದು ತುಂಬಾ ನೋವಿನ ಸಂಗತಿ. ವೃದ್ಧರನ್ನ ಹಿರಿಯರನ್ನ ಅಶಕ್ತರನ್ನು ಗೌರವಿಸುವುದು, ಶ್ರೇಷ್ಠ ಕಾರ್ಯ ಎಂದು ರೋಟರಿ ಜಿಲ್ಲಾ ಶ್ರೀ 3181 ಸಂಧ್ಯ ಸುರಕ್ಷತೆ ಚೇರ್ಮನ್ ರೋ. ಕೃಷ್ಣಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ನುಡಿದರು. ಅವರು ಬುಧವಾರ ಕಡಬ ತಾಲೂಕಿನ ನೋಜಿಬಾಳತ್ತೀಲದ ಮರಿಯಾಳ ಸೋಶಿಯಲ್ ಸೆಂಟರ್ ವೃದ್ಧಾಶ್ರಮದಲ್ಲಿ ಹಿರಿಯರನ್ನ ಗೌರವಿಸುವ ಹಾಗೂ ಮಧ್ಯಾಹ್ನದ ಭೋಜನ ವ್ಯವಸ್ಥೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸುಬ್ರಹ್ಮಣ್ಯ ರೋಟರಿ ಕ್ಲಬ್ ,ಇನ್ನರ್ ವೀಲ್ ಕ್ಲಬ್ ,ಹಾಗೂ ಸೀನಿಯರ್ ಚೇಂಬರ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸುಬ್ರಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ನಾಯರ್ ಸೀನಿಯರ್ ಚೇಂಬರ್ ಅಧ್ಯಕ್ಷ ರವಿ ಕಕ್ಕೆ ಪದವು, ಇನ್ನರ್ ವೀಲ್ ಅಧ್ಯಕ್ಸ್ ಶ್ರುತಿ ಮಂಜುನಾಥ್ ರೋಟರಿ ಕ್ಲಬ್ ಕಾರ್ಯದರ್ಶಿ ಚಿದಾನಂದ ಕುಲ ,ಇನ್ನರ್ವೀಲ್ ಕ್ಲಬ್ ಕಾರ್ಯದರ್ಶಿ ಚಂದ್ರ ಹೊನ್ನಪ್ಪ ,ವೃದ್ಧಾಶ್ರಮದ ಸಿಸ್ಟರ್ ಹಾಗೂ ಮೇಲ್ವಿಚಾರಕಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯರಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ರಾಮಕೃಷ್ಣ ಮಲ್ಲಾರ, ಲೋಕೇಶ್ ಎಣ್ಣೆಮಜಲ್, ಹಾಗೂ ಚಿದಾನಂದ ಕುಲ ಅವರ ಪುತ್ರಿ ಅದ್ವಿ ನಂದನ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಏರ್ಪಡಿಸಲಾಯಿತು.
ಇನ್ನರ್ವೇಲ್ ನ ಸಚಿತ ಗೋಪಾಲ್ ವೃದ್ಧರಿಗೆ ಬಟ್ಟೆ ಹಾಗೂ ಹಣ್ಣು ಹಂಪಲು ನೀಡಿದರು. ಸೀನಿಯರ್ ಚೇಂಬರ್ ಅಧ್ಯಕ್ಷ ರವಿ ಕಕ್ಕೆ ಪದವು ವೃದ್ಧಾಶ್ರಮಕ್ಕೆ ನಗದನ್ನು ನೀಡಿದರು. ರಾಮಕೃಷ್ಣ ಮಲ್ಲಾರ ಸ್ವಾಗತಿಸಿದರು. ಭರತ್ ನಿಕ್ರಾಜೆ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಚಿದಾನಂದ ಕುಳ ಧನ್ಯವಾದ ಸಮರ್ಪಿಸಿದರು.