ಅಧಿಕಾರಿಗಳು ಸ್ಪಂದನೆ ನೀಡದಿದ್ದಲ್ಲಿ ರಸ್ತೆ ತಡೆ ನಡೆಸಿ ಹೋರಾಟ ಮಾಡುವ ಎಚ್ಚರಿಕೆ ನೀಡಿದ ಸ್ಥಳೀಯ ಆಟೋ ಚಾಲಕರು
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಹಳೆಗೇಟು ಜಯನಗರ ಮೂಲಕ ಹಾದು ಹೋಗುವ ಮುಖ್ಯ ರಸ್ತೆ ಸರಿ ಸುಮಾರು 30ವರ್ಷಗಳ ಹಿಂದೆ ಪ್ರಾರಂಭಿಕ ಡಾಮಾರಿಕರಣ ಕಂಡಿದ್ದು ತದ ನಂತರ ಸುಮಾರು 15 ವರ್ಷಗಳ ಹಿಂದೆ ಮರು ಡಾಮರೀಕರಣ ಆಗಿರುತ್ತದೆ. ಇದೀಗ ಈ ರಸ್ತೆಯು 7 ವರ್ಷದಿಂದ ತೀರಾ ಹದೆಗೆಟ್ಟಿದ್ದು,ವಾಹನ ಚಾಲನೆಗಾಗಲಿ ಅಥವಾ ನಡೆದಾಡಲು ಸಂಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಪ್ರದೇಶವು ನಗರ ಪಂಚಾಯತ್ತಿನ 3 ಹಾಗೂ 19ನೇ ವಾರ್ಡನ್ನು ಹೊಂದಿದ್ದು ,ಎರಡೂ ವಾರ್ಡಿನ ಸದಸ್ಯರುಗಳು ಜನಪ್ರತಿನಿದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ .
ಕಳೆದ 4 ವರ್ಷಗಳ ಹಿಂದೆ 3ನೇ ವಾರ್ಡಿನ ಪ್ರತಿನಿದಿಗಳು ಶಾಸಕರ ಅನುದಾನದಿಂದ 300 ಮೀಟರ್ನಷ್ಟು ರಸ್ತೆ ಕಾಂಕ್ರಿಟೀಕರಣ ಗೊಳಿಸಿಲಾಗಿದೆ. ಅದು ಸರಿ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿರುತ್ತದೆ. ಇನ್ನುಳಿದ ಮುಕ್ಕಾಲು ಭಾಗ ತೀರಾ ಹದೆಗೆಟ್ಟಿದ್ದು ಅಧಿಕಾರಿಗಳಾಗಲಿ,ಆಡಳಿತಗಾರರು,ಮುತುವರ್ಜಿವಹಿಸಿಲ್ಲ.ಹೊರ ಊರುಗಳಿಂದ ಬರುವ ಪ್ರವಾಸಿಗರು ಹಿಡಿಶಾಪವನ್ನು ಹಾಕುತ್ತಿದ್ದಾರೆ.ಆಟೋ ರಿಕ್ಷಾ ಚಾಲಕರಿಗಂತೂ ನರಕ ಸದೃಷವಾಗುತ್ತಿದೆ .ಕಳೆದ ಹಲವು ವರ್ಷಗಳಿಂದ ಹೋರಾಟವನ್ನು ಮಾಡುತ್ತಿದ್ದರೂ ಯಾವುದೇ ಪ್ರಯೋಜನವಿಲ್ಲ.
ಕಳೆದ 3 ತಿಂಗಳ ಮೊದಲು ಸುಳ್ಯದ ತಹಶೀಲ್ದಾರರಿಗೆ ಮನವಿಯನ್ನು ನೀಡಿದ್ದು,ಚುನಾವಣೆ ಕಳೆದ ನಂತರ ನಿಮ್ಮ ರಸ್ತೆಯನ್ನು ಸರಿಪಡಿಸಲಾಗುದೆಂದು ಭರವಸೆಯನ್ನು ನೀಡಿರುತ್ತಾರೆ.ಇಷ್ಟು ಹದಗೆಟ್ಟ ರಸ್ತೆ ಸುಳ್ಯ ನಗರದ ಯಾವುದೇ ವಾರ್ಡಿನಲಿಲ್ಲ.ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ರಸ್ತೆ ಸರಿಪಡಿಸುವಲ್ಲಿ ಮುತುವರ್ಜಿವಹಿಸುವಿರೆಂದು ನಂಬುತ್ತೇವೆ.
ತಪ್ಪಿದಲ್ಲಿ ಸಾರ್ವಜನಿಕರನ್ನು ಸೇರಿಸಿ ರಸ್ತೆ ತಡೆಯುವ ಮೂಲಕ ಉಗ್ರ ಪ್ರತಿಭಟನೆ ಕೈಗೊಳ್ಳಲಿದ್ದೇವೆ ಎಂದು ಸ್ಥಳೀಯ ಆಟೋ ಚಾಲಕ ಉಸ್ಮಾನ್ ಜಯನಗರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.