ಅರಂತೋಡು ಪ್ರಥಮ ಹಂತದ ಗ್ರಾಮಸಭೆ

0

ಗ್ರಾಮೀಣ ರಸ್ತೆ, ಅಡಿಕೆ ಎಲೆಚುಕ್ಕಿ ರೋಗ, ಮಳೆಗಾಲದ ಪ್ರಾಕೃತಿಕ ವಿಕೋಪಗಳ ಮುನ್ನೆಚ್ಚರಿಕೆ ಕುರಿತು ವಿಸ್ತೃತ ಚರ್ಚೆ

ಅರಂತೋಡು ಗ್ರಾಮ ಪಂಚಾಯತ್ 2024 -25 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತಿಯ ಅಮೃತ ಸಭಾಂಗಣದಲ್ಲಿ ಜು.18ರಂದು ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಅಧ್ಯಕ್ಷತೆ ವಹಿಸಿದ್ದರು. ನೋಡೆಲ್ ಅಧಿಕಾರಿಯಾಗಿ ಸುಳ್ಯ ತಾಲೂಕು ಹಿಂದುಳಿದ ಕಲ್ಯಾಣ ಇಲಾಖೆಯ ಅಧಿಕಾರಿ ಗೀತಾ ಅವರು ಉಪಸ್ಥಿತರಿದ್ದರು.

ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಜಯಪ್ರಕಾಶ್ ಎಂ.ಆರ್. ಸ್ವಾಗತಿಸಿ, ಹಿಂದಿನ ವರ್ಷ ನಿರ್ಣಯಿಸಲಾದ ಆಂಬುಲೆನ್ಸ್ ವ್ಯವಸ್ಥೆ, ರಸ್ತೆ, ವಿದ್ಯುತ್ ದುರಸ್ಥಿ ಮತ್ತು ಈ ವರ್ಷದ ಮುಂದಿನ ದಿನಗಳಲ್ಲಿ ಆಗಬೇಕಾದ ಅಭಿವೃದ್ಧಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಗ್ರಾಮ ಪಂಚಾಯತ್ ಸಿಬ್ಬಂದಿ ಈಶ್ವರ್ ವರದಿ ಮತ್ತು ಜಮಾ ಖರ್ಚಿನ ವಿವರ ಮಂಡಿಸಿದರು.

ಸುಳ್ಯ ತಾಲೂಕಿನ ವಿವಿಧ ಇಲಾಖಾ ಅಧಿಕಾರಿಗಳಿಂದ ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಮೂಲಭೂತ ಸೌಲಭ್ಯಗಳಾದ ಗ್ರಾಮೀಣ ಪ್ರದೇಶದ ರಸ್ತೆ ಸಮಸ್ಯೆ, ವಿದ್ಯುತ್ ಸಮಸ್ಯೆ , ವಿದ್ಯುತ್ ಕಂಬಗಳ ಸರಿ ಪಡಿಸುವಿಕೆ, ವಿದ್ಯು ತ್ ಕಂಬಗಳಿಗೆ ಅಡ್ಡ ಲಾಗಿ ನಿಂತಿರುವ ಮರ ತೆರವು ಗೊಳಿಸುವ ಕಾರ್ಯ, ಅಡಿಕೆ ಎಲೆ ಚುಕ್ಕಿ ರೋಗ, ರಸ್ತೆ ಕಾಂಕ್ರೀಟ್, ನೀರಿನ ಸಮಸ್ಯೆ, ಬೆಳೆ ವಿಮೆ ಮತ್ತು ಪರಿಹಾರ, ಸ್ವಚ್ಛತೆ, ದನಗಳ ಮತ್ತು ಬೀದಿ ನಾಯಿಗಳ ತೊಂದರೆ ,ರಸ್ತೆ ಕಾಂಕ್ರಿಟೀಕರಣ, ಹಾಸ್ಟೆಲ್ ವಾರ್ಡನ್ ಕೊರತೆ, ಮಳೆಗಾಲದ ಪ್ರಾಕೃತಿಕ ವಿಕೋಪ ಮತ್ತು ಮುಂಜಾಗೃತಾ ಕ್ರಮಗಳು, ಡೆಂಗ್ಯೂ ಜ್ವರದ ಬಗ್ಗೆ ಆರೋಗ್ಯ ಇಲಾಖೆಯ ಮುನ್ನೆಚ್ಚರಿಕೆ ಕ್ರಮಗಳು ಸೇರಿದಂತೆ ಮೊದಲಾದ ಮೂಲಭೂತ ಸಮಸ್ಯೆಗಳ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕುರಿತು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಭವಾನಿ ಸಿ. ಎ ಸದಸ್ಯರಾದ ಶಿವಾನಂದ ಕುಕ್ಕಂಬಳ,ವಗಂಗಾಧರ ಬನ ,ರವೀಂದ್ರ ಪೂಜಾರಿ, ವೇಣುಗೋಪಾಲ ಪೆತ್ತಾಜೆ, ಮಾಲಿನಿ ಉಳುವಾರು ಶಶಿಧರ ತೊಡಿಕಾನ, ಹರಿಣಿ ದೇರಾಜೆ, ಸರಸ್ವತಿ ಬಿಳಿಯಾರು , ಭವಾನಿ ಅಡ್ಯಡ್ಕ ,ಪುಷ್ಪಾದರ, ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತ ಮೊಟ್ಟೆ, ಇಲಾಖೆಯ ಅಧಿಕಾರಿ ವರ್ಗದವರು, ಗ್ರಾಮಸ್ಥರು, ಆಶಾ ಕಾರ್ಯ ಕರ್ತೆಯರು, ಗ್ರಾ. ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಭವಾನಿ ಸಿ. ಎ ವಂದಿಸಿದರು. ಬಳಿಕ ಗ್ರಾಮ ಪಂಚಾಯತ್ ವತಿಯಿಂದ ಉಚಿತ ಹಣ್ಣಿನ ಗಿಡಗಳಿಗನ್ನು ವಿತರಿಸಲಾಯಿತು.