ಕಳೆದ ಒಂದು ವಾರಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಸುಳ್ಯದ ಹಲವಾರು ನದಿ ತಟಗಳು ಮಳೆ ನೀರಿನಿಂದ ತುಂಬಿ ಹರಿಯುತ್ತಿದೆ.
ಸುಳ್ಯ ಜಯನಗರ ಕೊಡಿಯಾಲಬೈಲಿನಲ್ಲಿರುವ ಬ್ರಹ್ಮರಗಯ ನದಿಯು ಕೂಡ ತುಂಬಿ ಹರಿಯುತ್ತಿದ್ದು ನೀರು ಬ್ರಹ್ಮರಗಯ ಶ್ರೀ ಅಯ್ಯಪ್ಪ ಗುಡಿಯ ಹಿಂಬದಿಯ ಆವರಣದ ಸಮಾನವಾಗಿ ಹರಿಯುತ್ತಿದೆ. ಅದೇ ರೀತಿ ಹಳೆಗೇಟು ಸೇತುವೆಯ ಬಳಿ ಸ್ಥಳೀಯ ಕಟ್ಟಡದ ಕೆಳ ಭಾಗಕ್ಕೆ ಸಮಾನಕ್ಕೆ ಬಂದಿದ್ದು ಇನ್ನು ಹೆಚ್ಚು ಮಳೆಯಾದಲ್ಲಿ ನೀರು ಮೇಲೆ ಬರುವ ಸಾಧ್ಯತೆ ಇದೆ.
ಆದ್ದರಿಂದ ಈ ಭಾಗದ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ.