ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘದ ಸ್ಥಾಪನಾ ದಿನಾಚರಣೆ

0

ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘದ (ಬಿಎಂಎಸ್) ಇದರ 70ನೇ ವರ್ಷದ ಸ್ಥಾಪನಾ ದಿನಾಚರಣೆಯನ್ನು ಜು.23ರಂದು ಹಳೆಗೇಟಿನ ಕಾರ್ಮಿಕ ಸಮುದಾಯ ತಿಲಕ ಭವನದಲ್ಲಿ ಆಚರಿಸಲಾಯಿತು.

ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ಅಧ್ಯಕ್ಷತೆ ವಹಿಸಿದ್ದರು.


ಈ ಸಂದರ್ಭದಲ್ಲಿ ಸಂಘದ ಬಿ.ಎಂ.ಎಸ್ ನ ಸ್ಥಾಪಕಾಧ್ಯಕ್ಷ ಗೋಪಾಲಕೃಷ್ಣ ಭಟ್, ಕಾನೂನು ಸಲಹೆಗಾರ ಭಾಸ್ಕರ್ ರಾವ್, ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ಉಬರಡ್ಕ , ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ, ಕೋಶಾಧಿಕಾರಿ ನಿತ್ಯಾನಂದ ಬಿ, ಸುರೇಂದ್ರ ಕಾಮತ್ ಹಾಗೂ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ತಾಲೂಕಿನ ಎಲ್ಲಾ ಬಿ.ಎಂ.ಎಸ್. ಘಟಕದಲ್ಲಿ ಏಕ ಕಾಲದಲ್ಲಿ ಕಾರ್ಯಕ್ರಮ ‌ಮಾಡಲಾಯಿತು.