ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜು ನಿಂತಿಕಲ್ಲು ಇಲ್ಲಿ 2023–24 ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ವಾರ್ಷಿಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ 12 ವಿದ್ಯಾರ್ಥಿಗಳನ್ನು ಮುಖ್ಯ ಅತಿಥಿಗಳಾದ ಬಿ.ವಿ ಸೂರ್ಯ ನಾರಾಯಣ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯರು, ಸಂಪನ್ಮೂಲ ವ್ಯಕ್ತಿಗಳೂ ಆದ ಬಿ.ವಿ ಸೂರ್ಯ ನಾರಾಯಣರವರು ವಿದ್ಯಾರ್ಥಿಗಳು ಸಾಧನೆ ಮತ್ತು ಗುರಿ ತಲುಪಲು ಸಾಧಕರ ಸತತ ಪ್ರಯತ್ನಗಳ ಬಗ್ಗೆ ತಿಳಿದುಕೊಂಡು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದರು.
ಸನ್ಮಾನಿತ ವಿದ್ಯಾರ್ಥಿಗಳ ಪರವಾಗಿ ಮಹಮ್ಮದ್ ಅನೀಸ್ , ಸೃಜನ್, ಅನ್ವೇಶ್ ಕೆ.ಎಂ ಮತ್ತು ಪೋಷಕರ ಪರವಾಗಿ ಮೇದಪ್ಪ ಗೌಡ ಕುದ್ಮಾರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಅಧ್ಯಕ್ಷತೆಯನ್ನು ವಹಿಸಿದ್ದ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಕೆ.ಎಸ್ ಮಾತನಾಡಿ, ತಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳ ಸಾಧನೆಗಳನ್ನು ಕಂಡಾಗ ಹೆಮ್ಮೆ ಮತ್ತು ತೃಪ್ತಿ ಸಿಗುತ್ತದೆ ಎಂದರು. ವೇದಿಕೆಯಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಅಶೋಕ್ ಕುಮಾರ್, ಕೆ.ಎಸ್ ಗೌಡ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಉಮೇಶ್ ಗೌಡ ಎಚ್, ಶಿಕ್ಷಕ — ರಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಉಪಸ್ಥಿತರಿದ್ದು, ಸಂದರ್ಭೋಚಿತವಾಗಿ ಮಾತನಾಡಿದರು.
ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸದಾನಂದ ರೈ ಕೂವೆಂಜ ಸಾಧಕ ವಿದ್ಯಾರ್ಥಿಗಳ ವಿವರ ನೀಡಿದರು.
ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಜೀವಶಾಸ್ತ್ರ ಉಪನ್ಯಾಸಕರಾದ ಜೀವನ್ ಎಸ್.ಎಚ್ ಸ್ವಾಗತಿಸಿದರು. ರಸಾಯನ ಶಾಸ್ತ್ರ ಉಪನ್ಯಾಸಕಿ ಜ್ಯೋತ್ಸ್ನಾ ಎಂ.ಜೆ ವಂದಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಭೌತಶಾಸ್ತ್ರ ಉಪನ್ಯಾಸಕರಾದ ಉಜ್ವಲ್ ಕೆ.ಎಚ್ ಶಿಕ್ಷಕ — ರಕ್ಷಕ ಸಂಘದ ರಚನಾ ಪ್ರಕ್ರಿಯೆಯನ್ನು ನಡೆಸಿ ಕೊಟ್ಟರು. ಉಪನ್ಯಾಸಕಿಯರಾದ ವೇದಾವತಿ ಎಸ್, ಸಂಧ್ಯಾ, ಜಾಸ್ಮಿನ್, ಸಮೀಕ್ಷಾ ಅತಿಥಿಗಳನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಕೌನ್ಸಿಲ್ ನ ಅಧ್ಯಕ್ಷ ವಿಖ್ಯಾತ್ ಗೌಡ, ಕಾರ್ಯದರ್ಶಿ ಸಫಲ್ ರೈ, ಜೊತೆ ಕಾರ್ಯದರ್ಶಿ ಅನುಜ್ಞಾ ಕೆ.ಎಂ, ಕ್ರೀಡಾ ಕಾರ್ಯದರ್ಶಿಗಳಾದ ವಿಖ್ಯಾತ್ ಎಂ.ವಿ, ಅವನೀ ಸಿ.ಎಲ್, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ರಶ್ವಿನ್ ರೈ, ಮೇಘಶ್ರೀ ಉಪಸ್ಥಿತರಿದ್ದರು.
ಪ್ರಮೀಳಾ ಕೆ ಮತ್ತು ವಿಮಲ ಎಂ ಸಹಕರಿಸಿದರು.