ಶಾಲಾ ಮೈದಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ, ಶಾರದೋತ್ಸವ ಆಚರಣೆಗೆ ಅನುಮತಿ ನಿರಾಕರಣೆ

0

ಶಾಲಾ ಮೈದಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ, ಶಾರದೋತ್ಸವ ಸಹಿತ ಧಾರ್ಮಿಕ ಕಾರ್ಯಕ್ರಮ ಆಚರಣೆಗೆ ಸರಕಾರ ಅನುಮತಿ ನಿರಾಕರಣೆ ಮಾಡಿರುವುದನ್ನು ಖಂಡಿಸಿ ಸುಳ್ಯ ಬಿಜೆಪಿ ಯುವ ಮೋರ್ಚಾದ ವತಿಯಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಯಿತು.
ತಾಲೂಕು ಕಚೇರಿಯ ಮುಂಭಾಗದಲ್ಲಿ ಸೇರಿದ ನಾಯಕರು ಹಾಗೂ ಕಾರ್ಯಕರ್ತರು ಕೈಯಲ್ಲಿ ತಾಳ ಹಿಡಿದು ದೇವರ ನಾಮಗಳ ಭಜನೆ ಹಾಡಿದರು.


ಬಳಿಕ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆಯವರು,ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ, ಶಾರದೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಹಲವು ವರ್ಷಗಳಿಂದ ಶಾಲಾ ಮೈದಾನದಲ್ಲಿ ಆಚರಿಸಿಕೊಂಡು ಬರುತ್ತಿರುವುದು ಒಂದು ಪದ್ಧತಿ. ಇದನ್ನು ಈಗಿನ ಸರಕಾರ ತಡೆ ಹಿಡಿದು ಆದೇಶ ಹೊರಡಿಸಿರುವುದು ಖಂಡನೀಯ. ಈ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಹೇಳಿದರು.


ಯುವ ನಾಯಕ ಮನುದೇವ ಪರಮಲೆ ಮಾತನಾಡಿ, ಶಾಲಾ ಮೈದಾನಗಳಲ್ಲಿ ಹಿಂದೂ ಧಾರ್ಮಿಕ ಕಾರ್ಯಗಳಿಗೆ ಅನುಮತಿ ನಿರಾಕರಣೆ ಯ ಆದೇಶ ನಮ್ಮ ದುರಾದೃಷ್ಟ. ಇದನ್ನು ಸರಕಾರ ಹಿಂಪಡೆಯಬೇಕು” ಎಂದು ಒತ್ತಾಯಿಸಿದರು.


ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿನಯ ಮುಳುಗಾಡು ಮಾತನಾಡಿ, ಭಜನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಸ್ಥಳೀಯವಾಗಿ ಆಚರಿಸುವುದು ಹಲವು ವರ್ಷದಿಂದ ನಡೆದುಕೊಂಡು ಬಂದಿದೆ. ಮತ್ತು ದೇಶದ ಅಸ್ಮಿತೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮ. ನಮ್ಮ ಸಂಸ್ಕೃತಿಯನ್ನು ಉಳಿಸುವ ಕಾರ್ಯ. ಇದಕ್ಕೆ ಸರಕಾರಗಳು ತಡೆ ಒಡ್ಡುತ್ತಿರುವುದುಖಂಡನೀಯ” ಎಂದು ಹೇಳಿದರು.


ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎ.ವಿ. ತೀರ್ಥರಾಮ ಮಾತನಾಡಿ, ಶಾಲೆಗಳಲ್ಲಿ ನಿರಂತರವಾಗಿ ಭಜನೆಯಂತ ಕಾರ್ಯಕ್ರಮಗಳು ನಡೆಯುತ್ತಾ ಬರುತಿತ್ತು. ಅದರಲ್ಲಿ ಹಿಂದು, ಮುಸ್ಲಿಂ ರು ಕೂಡಾ ಸೇರಿಕೊಂಡು ಭಜನೆ ಮಾಡುತ್ತಿದ್ದರು. ಆದರೆ ಕಾಂಗ್ರೆಸ್ ತುಷ್ಠಿಕರಣ ಮಾಡಿ ಈ ರೀತಿಯ ಗೊಂದಲ ಸೃಷ್ಠಿ ಮಾಡುತ್ತಿದೆ. ಕಾನೂನು ಜಾರಿ ಮಾಡುವಾಗ ಯಾರಿಗೂ ತೊಂದರೆಯಾಗದಂತೆ ಮಾಡಬೇಕು. ಹಲವು ವರ್ಷದಿಂದ ಶಾಲೆಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಮಾಡುತ್ತಾ ಬರುತ್ತಿzವೆ. ನಾವು ಅದನ್ನು ನಿಲ್ಲಿಸುವುದಿಲ್ಲ. ಈ ಬಾರಿಯೂ ಅಲ್ಲೇ ಮಾಡುತ್ತೇವೆ” ಎಂದು ಹೇಳಿದರು.


ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ ಶಾಲಾ ಮೈದಾನದಲ್ಲಿ ಆಗುತ್ತಿರುವ ಕಾರ್ಯಗಳಿಗೆ ತಡೆ ಮಾಡುವಂತ ಕೀಳು ಮಟ್ಟದ ಸರಕಾರ ಇದುವರೆಗೆ ರಾಜ್ಯದಲ್ಲಿ ಇರಲಿಲ್ಲ. ಜನ ಸಾಮಾನ್ಯರ ಸಮಸ್ಯೆಗಳ ಕುರಿತು ಕೆಲಸ ಮಾಡಬೇಕಾದ ಸರಕಾರಗಳು ಇಂದು ಜನರ ಮಧ್ಯೆ ಗೊಂದಲ ಸೃಷ್ಠಿಸುವಂತಹ ಕೆಲಸಕ್ಕೆ ಕೈ ಹಾಕಿದೆ. ಈಗ ನಡೆಯುವ ಅಧಿವೇಶನ ಮುಗಿಯುವ ಒಳಗೆ ಹೊರಡಡಿಸಿರುವ ಆದೇಶವನ್ನು ಹಿಂಪಡೆಯಬೇಕೆಂದು ನಾವು ಆಗ್ರಹಿಸುವುದಾಗಿ ಅವರು ಹೇಳಿದರು.
ಬಳಿಕ ತಹಶೀಲ್ದಾರ್ ಜಿ.ಮಂಜುನಾತರು ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ, ಸರಕಾರಕ್ಕೆ ಕಳುಹಿಸಿಕೊಡುವುದಾಗಿ ಹೇಳಿದರು. ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೊಲ್ಲರಮೂಲೆ ಮನವಿ ವಾಚಿಸಿದರು.


ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ., ರಾಕೇಶ್ ರೈ ಕೆಡೆಂಜಿ, ವಿಕ್ರಂ ಅಡ್ಪಂಗಾಯ, ಸುಭೋದ್ ಶೆಟ್ಟಿ, ಬುದ್ದ ನಾಯ್ಕ, ಕೇಶವ ಮಾಸ್ತರ್ ಹೊಸಗದ್ದೆ, ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು, ಶಿವರಾಮ ಕೇರ್ಪಳ, ಎ.ಟಿ.ಕುಸುಮಾಧರ, ಶಿವಾನಂದ ಕುಕ್ಕುಂಬಳ, ಜಗನ್ನಾಥ ಜಯನಗರ, ಸುನಿಲ್ ಕೇರ್ಪಳ, ಅಶೋಕ್ ಅಡ್ಕಾರು, ನಾರಾಯಣ ಎಂ.ಎಸ್. ಶಾಂತಿನಗರ, ರೂಪೇಶ್ ಪೂಜಾರಿಮನೆ, ವರ್ಷಿತ್ ಚೊಕ್ಕಾಡಿ, ಶಿವನಾಥ ರಾವ್ ಹಳೆಗೇಟು, ಗೋವಿಂದ ಅಳವುಪಾರೆ, ಪ್ರಭೋದ್ ಶೆಟ್ಟಿ, ಕೃಷ್ಣಯ್ಯ, ರಮೇಶ ಇರಂತಮಜಲು, ದಿನೇಶ್ ಕಣಕ್ಕೂರು, ಜಯರಾಜ್ ಕುಕ್ಕೆಟ್ಟಿ, ವಿನುತಾ ಪಾತಿಕಲ್ಲು, ಸುಪ್ರೀತ್ ಮೋಂಟಡ್ಕ, ನಿಕೇಶ್ ಉಬರಡ್ಕ, ಅವಿನಾಶ್ ಕುರುಂಜಿ, ರಾಕೇಶ್ ಕಿರಿಭಾಗ, ಕೌಶಲ್ ಸುಳ್ಯ, ಸುಧಾಕರ ಕುರುಂಜಿಭಾಗ್, ಹರ್ಷಿತ್ ಕಾರ್ಜ, ಪ್ರಭೋದ್ ಶೆಟ್ಟಿ ಮೇನಾಲ, ಸುನಿಲ್ ರೈ, ಮಹೇಶ್ ಮೇನಾಲ, ಬೂಡು ರಾಧಾಕೃಷ್ಣ ರೈ, ರಾಜೇಶ್ ಕಿರಿಭಾಗ, ಶಶಿಕಲಾ ನೀರಬಿದಿರೆ, ಶಿಲ್ಪಾ ಸುದೇವ್, ಸುದರ್ಶನ ಪಾತಿಕಲ್ಲು, ಕಿಶೋರಿ ಶೇಟ್, ಸರೋಜಿನಿ ಪೆಲ್ತಡ್ಕ, ಹರಿಣಾಕ್ಷಿ ಬೇಲ್ಯ, ಗುಣವತಿ ಕೊಲ್ಲಂತಡ್ಕ, ಪುಷ್ಪಾ ಮೇದಪ್ಪ, ಹೇಮಂತ್ ಕುಮಾರ್ ಕಂದಡ್ಕ, ಶ್ರೀಧರ ಕುತ್ಯಾಳ, ಚಂದ್ರಜಿತ್ ಮಾವಂಜಿ, ನಾರಾಯಣ ಬಂಟ್ರಬೈಲು, ಶೀನಪ್ಪ ಬಯಂಬು, ನವೀನ ಎಲಿಮಲೆ ಮೊದಲಾದವರಿದ್ದರು.

ಲತೀಶ್ ಗುಂಡ್ಯ ಕಾರ್ಯಕ್ರಮ ನಿರೂಪಿಸಿದರು.