ಪಂಜದಲ್ಲಿ ತಾಲೂಕು ಮಟ್ಟದ ಆಟಿ ಸಂಭ್ರಮ-ಉದ್ಘಾಟನೆ

0

ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ ) ಸುಳ್ಯ ಹಾಗೂ ವನಿತಾ ಸಮಾಜ (ರಿ) ಪಂಜ ಇವುಗಳ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ಆಟಿ ಸಂಭ್ರಮ-2024 ಪಂಜ ವನಿತಾ ಸಮಾಜದಲ್ಲಿ ಜು.23 ರಂದು ನಡೆಯಿತು.

ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಧುಮತಿ ಶೆಟ್ಟಿ ಬೊಳ್ಳೂರು ಉದ್ಘಾಟಿಸಿ ಮಾತನಾಡಿ “ನಮ್ಮ ಸಂಪ್ರದಾಯವನ್ನು ಕಡೆಗಣಿಸಿ ಬಾರದು. ಅದಕ್ಕಾಗಿ ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ರಮ ಆಟಿ ಸಂಭ್ರಮ ” ಎಂದು ಹೇಳಿದರು.

ಪಂಜ ವನಿತಾ ಸಮಾಜ ಅಧ್ಯಕ್ಷೆ ಶ್ರೀಮತಿ ಮಾಲಿನಿ ಕುದ್ವ ಸಭಾಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಗಿರಿಜಾ ಕೆದಿಲ, ಕೇನ್ಯ ಶಾರದಾ ಗಾರ್ಡನ್ ಶ್ರೀಮತಿ ಮಮತಾ ಎಸ್ ಶೆಟ್ಟಿ ರವರು ಶುಭ ಹಾರೈಸಿದರು.

ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಅನಿತಾ ಸುತ್ತುಕೋಟೆ, ವನಿತಾ ಸಮಾಜದ ಗೌರವಾಧ್ಯಕ್ಷೆ ಶ್ರೀಮತಿ ಪುಷ್ಪ ಡಿ ಪ್ರಸಾದ್ ಕಾನತ್ತೂರ್, ಕಾರ್ಯದರ್ಶಿ ಪವಿತ್ರಾ ಕುದ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀಮತಿ ಹೇಮಾ ಜನಾರ್ಧನ ವೇದಿಕೆಗೆ ಆಹ್ವಾನಿಸಿದರು. ಶ್ರೀಮತಿ ಸೌಮ್ಯ ಹರಿಶ್ಚಂದ್ರ ಪ್ರಾರ್ಥಿಸಿದರು. ಶ್ರೀಮತಿ ಲತಾ ಸವಿತಾರ ಮುಡೂರು ನಿರೂಪಿಸಿದರು. ಶ್ರೀಮತಿ ಪುಷ್ಪ ಡಿ ಪ್ರಸಾದ್ ಕಾನತ್ತೂರ್ ಸ್ವಾಗತಿಸಿದರು ಮತ್ತು ಪ್ರಾಸ್ತಾವಿಕ ಮಾತನಾಡಿದರು. ಶ್ರೀಮತಿ ಭವ್ಯ ಕುದ್ವ , ಶ್ರೀಮತಿ ಪ್ರೇಮಾ ಬೇರ್ಯ, ಅತಿಥಿಗಳನ್ನು ಪರಿಚಾಯಿಸಿದರು.ಶ್ರೀಮತಿ ಅನಿತಾ ಸುತ್ತುಕೋಟೆ ವಂದಿಸಿದರು.

ಬಳಿಕ ಅಟಿ ಕಳೆಂಜ,ವಿವಿಧ ಸ್ಪರ್ಧೆಗಳೊಂದಿಗೆ ಹಾಗೂ ಆಟಿ ತಿಂಗಳ ವಿವಿಧ ಬಗೆಯ ತಿಂಡಿ ತಿನಿಸುಗಳ ಜೊತೆ ಭೋಜನದೊಂದಿಗೆ ಸಂಭ್ರಮದಲ್ಲಿ ನಡೆಯಿತು.