ರಸ್ತೆ ಬದಿಯ ಮುಳ್ಳಿನ ಗಿಡಗಳಿಂದ ರಕ್ಷಣೆ ಪಡೆದು ನಡೆದಾಡುವ ಪರಿಸ್ಥಿತಿ
ಎಚ್ಚರ ತಪ್ಪಿದರೆ ಅನಾಹುತ ಖಚಿತ
ಸುಳ್ಯದಿಂದ ಅಜ್ಜಾವರಕ್ಕೆ ಹೋಗುವ ರಸ್ತೆಯ ಕಾಂತಮಂಗಲ ಸೇತುವೆ ಬಳಿ ರಸ್ತೆ ಬದಿಯಲ್ಲಿ ಮರದ ರೆಂಬೆಗಳು, ಬಿದುರು ಕಾಡಿನ ಮುಳ್ಳುಗಳು,, ಕಾಡು ಬಳ್ಳಿಗಳು ಆವರಿಸಿ ಪರಿಸರ ಅಪಾಯಕಾರಿ ಸ್ಥಿತಿಯಲ್ಲಿ ಬಂದು ನಿಂತಿದೆ.
ಅಲ್ಲದೆ ರಸ್ತೆ ಬದಿಯಲ್ಲಿ ಬೆಳೆದು ನಿಂತಿರುವ ಮುಳ್ಳಿನ ಗಿಡಗಳು ಈ ಭಾಗದಲ್ಲಿ ನಡೆದಾಡುವ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸಮಸ್ಯೆಗಳನ್ನು ತಂದೊಡ್ಡಿದೆ.
ರಸ್ತೆಯ ಎರಡೂ ಭಾಗದಲ್ಲಿ ಕೂಡ ಇದೇ ರೀತಿಯಲ್ಲಿ ಇದ್ದು ಸೇತುವೆಯ ಎರಡೂ ತುದಿಗಳಲ್ಲಿ ಇದೇ ದುಸ್ಥಿತಿ ಕಂಡು ಬರುತ್ತಿದೆ.
ರಸ್ತೆಯ ವಿಸ್ತೀರ್ಣವೂ ಕೂಡ ಕಡಿಮೆ ಇದ್ದು ಮುಳ್ಳುಗಳ ರಕ್ಷಣೆಗಾಗಿ ಕಾಲು ಒಂದು ಚೂರು ಪಕ್ಕದಲ್ಲಿ ಇಟ್ಟರೆ ಪಾತಾಳ ಗುಂಡಿಗೆ ಬೀಳುವುದಂತೂ ಖಚಿತ ವಾಗಿದೆ.
ಇದೇ ರಸ್ತೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ನೂರಾರು ಸಣ್ಣ ಪುಟ್ಟ ವಿದ್ಯಾರ್ಥಿಗಳು ಕಾಲ್ನಡಿಗೆ ಮತ್ತು ವಾಹನಗಳಲ್ಲಿ ಸಂಚರಿಸುತ್ತಿದ್ದು ಅಪಾಯದ ಮುನ್ಸೂಚನೆ ನೀಡುತ್ತಿದೆ.
ಸಂಭಂದ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿ ಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳ ಬೇಕಾಗಿದೆ