Home Uncategorized ವಿದ್ಯಾಮಾತಾ ಅಕಾಡೆಮಿಯಲ್ಲಿ ನವೋದಯ , ಸೈನಿಕ ಶಾಲಾ ಪ್ರವೇಶ ಪರೀಕ್ಷೆಗೆ ತರಬೇತಿ

ವಿದ್ಯಾಮಾತಾ ಅಕಾಡೆಮಿಯಲ್ಲಿ ನವೋದಯ , ಸೈನಿಕ ಶಾಲಾ ಪ್ರವೇಶ ಪರೀಕ್ಷೆಗೆ ತರಬೇತಿ

0

ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಅಧೀನಕ್ಕೆ ಒಳಪಟ್ಟಿರುವ ನವೋದಯ ಶಾಲಾ ಪ್ರವೇಶ ಪರೀಕ್ಷೆ ಹಾಗೂ ಸೈನಿಕ ಶಾಲಾ ಪರೀಕ್ಷೆ ಸೇರಿದಂತೆ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಕೇಂದ್ರವಾದ ವಿದ್ಯಾಮಾತಾ ಅಕಾಡೆಮಿಯು ಪೂರ್ವ ತಯಾರಿ ತರಬೇತಿಯನ್ನು ಪ್ರಾರಂಭಿಸಿದ್ದು, ಸದ್ಯ ಸರಕಾರವು ಕೇವಲ 6ನೇ ತರಗತಿಯ ಪ್ರವೇಶಾತಿಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪ್ರಾರಂಬಿಸಿರುತ್ತದೆ.
ಎಲ್ಲಾ ವಸತಿ ಶಾಲೆಗಳ 6ನೇ ಮತ್ತು 9ನೇ ತರಗತಿಯ ಪ್ರವೇಶಾತಿಯನ್ನು ಬಯಸುವ ವಿದ್ಯಾರ್ಥಿಗಳು ವಿದ್ಯಾಮಾತಾ ಅಕಾಡೆಮಿಯ ಈ ತರಬೇತಿಯ ಸೌಲಭ್ಯವನ್ನು ಪಡೆದುಕೊಳ್ಳಲು ಸಂಸ್ಥೆಯ ಕೇಂದ್ರ ಕಚೇರಿಯಾದ ವಿದ್ಯಾಮಾತಾ ಅಕಾಡೆಮಿ ಪುತ್ತೂರು ಹಾಗೂ ಸಂಸ್ಥೆಯ ಸುಳ್ಯ ಶಾಖೆಯನ್ನು ಸಂಪರ್ಕಿಸಿ ತಕ್ಷಣವೆ ದಾಖಲಾತಿಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

2023ನೇ ಸಾಲಿನಲ್ಲಿ ನಡೆದ ನವೋದಯ/ಸೈನಿಕ ಶಾಲಾ ಪ್ರವೇಶ ಪರೀಕ್ಷೆಗೆ ಪೂರಕವಾಗಿ ತರಬೇತಿಯನ್ನು ನೀಡಿದ್ದ ವಿದ್ಯಾಮಾತಾ ಅಕಾಡೆಮಿ ನವೋದಯ ಶಾಲಾ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದ ಸಂಸ್ಥೆಯ ವಿದ್ಯಾರ್ಥಿ ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದು ಗಮನಿಸಬೇಕಾದ ಅಂಶ.
ಅದೇ ರೀತಿ ಸೈನಿಕ ಶಾಲಾ ಪ್ರವೇಶ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳೂ ಉತ್ತೀರ್ಣರಾಗುವ ಮೂಲಕ ತನ್ನ ಮೊದಲ ತರಬೇತಿಯಲ್ಲೇ ಶೇ. 100 ಫಲಿತಾಂಶ ಪಡೆಯುವ ಮೂಲಕ ಅಮೋಘ ಸಾಧನೆ ಮಾಡುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿರುವುದು ಸಂಸ್ಥೆಯ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ.

ಈ ಕೆಳಗಿನ ಆಯ್ಕೆ ಪ್ರಕ್ರಿಯೆಯು 6ನೇ ತರಗತಿಯ ಪ್ರವೇಶಕ್ಕೆ ಮಾತ್ರ ಸೀಮಿತವಾಗಿದ್ದು,ಉಳಿದ ಶಾಲೆಗಳ ಪ್ರವೇಶಕ್ಕೆ ಸಂಬಂದಿಸಿದ ಅರ್ಹತೆಗಳು ಆಯಾ ವಸತಿ ಶಾಲಾ ಆಯ್ಕೆ ಪ್ರಕ್ರಿಯೆ ಪ್ರಾರಂಬಿಸುವ ಸಂದರ್ಭದಲ್ಲಿ ಪ್ರಕಟಿಸುವ ಅದಿಸೂಚನೆಯಲ್ಲಿ ಪ್ರಕಟಗೋಳ್ಳುತ್ತದೆ.

ಅರ್ಜಿ ಸಲ್ಲಿಕೆಗೆ ಕೊನೆ ದಿನ ಸೆಪ್ಟೆಂಬರ್ 16. ವಯೋಮಿತಿ; ದಿ. 01.05.2013 ರಿಂದ 31.07.2015ರ ನಡುವೆ ಜನಿಸಿರಬೇಕು.

  • ಅವಶ್ಯಕ ದಾಖಲೆ : ಶಾಲಾ ದೃಡೀಕರಣ ಪತ್ರ, ಫೋಟೋ, ಅಂಕಪಟ್ಟಿ,ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ.
  • ಜವಾಹರ್ ನವೋದಯ ಪ್ರವೇಶ ಸೇರಿದಂತೆ ವಿವಿಧ ವಸತಿ ಶಾಲಾ ಪ್ರವೇಶ ಪ್ರಕ್ರಿಯೆಗೆ ಅರ್ಜಿ ಸಲ್ಲಿಕೆ ಹಾಗೂ ಪರೀಕ್ಷಾ ಪೂರ್ವ ತಯಾರಿ ತರಬೇತಿಗಾಗಿ ಅಕಾಡೆಮಿಯ
    ಪುತ್ತೂರು ಕಛೇರಿ : PH: 9148935808, 96204 68869.

ಸುಳ್ಯ ಶಾಖೆ PH: 9448527606.

ಕಾರ್ಕಳ ಶಾಖೆ: ಫೋನ್ 8310484380 , 9740564044.

NO COMMENTS

error: Content is protected !!
Breaking