ಆಲೆಟ್ಟಿ ಗ್ರಾಮದ ನಾಗಪಟ್ಟಣ ನಿವಾಸಿ ದಿ.ಐತ್ತಪ್ಪ ರೈ ಯವರ ಪತ್ನಿ ಶ್ರೀಮತಿ ಲೀಲಾವತಿ ರೈ ಯವರು ಇಂದು ಮಧ್ಯಾಹ್ನ ಮನೆಯಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ನಾರಾಯಣ ರೈ, ವಿನಯಕುಮಾರ್ ರೈ ಬಾರ್ಪಣೆ, ಪುತ್ರಿಯರಾದ ರಾಧಿಕಾ ಬಾಲಕೃಷ್ಣ ರೈ ಪಂಜ,ರಚನಾ ರವಿರಾಜ್ ರೈ ಈಶ್ವರಮಂಗಲ, ಸೊಸೆಯಂದಿರಾದ ಮೋಹಿನಿ ರೈ, ಸುಕನ್ಯಾ ರೈ, ಸಹೋದರ ಆನಂದ ರೈ ದುಗಲಡ್ಕ, ಸಹೋದರಿ ಯರಾದ ಪದ್ಮಾವತಿ ರೈ ಪುತ್ತೂರು, ಕಮಲಾ ರೈ ಜಟ್ಟಿಪಳ್ಳ ಮತ್ತು ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು ,ಬಂಧು ವರ್ಗದವರನ್ನು ಅಗಲಿದ್ದಾರೆ.