ರೋಟೋರಿಯ ಧ್ಯೇಯ ಉದ್ದೇಶಗಳಲ್ಲಿ ಒಂದಾದ ಮೂಲಭೂತ ಶಿಕ್ಷಣ ಹಾಗೂ ಸಾಕ್ಷರತೆ ಇದರ ಅಂಗವಾಗಿ ರೋಟರಿ ಕ್ಲಬ್ ಸುಳ್ಳದ ವತಿಯಿಂದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪೇರಾಲು ನಲ್ಲಿ ವಿದ್ಯಾರ್ಥಿ ವೇತನ ಹಾಗೂ ಉಚಿತ ಪುಸ್ತಕ ವಿತರಣೆ ನಡೆಯಿತು.
ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು. ಪುಸ್ತಕ ವಿತರಣೆಯನ್ನು ರೊ. ರಮಾ ವೈ.ಕೆ. ನಿವೃತ್ತ ಪ್ರಾಂತ್ಯ ಪಾಲರು, ಎನ್ ಎಂ ಪಿ ಯು ಕಾಲೇಜ್ ಅರಂತೋಡು ಇವರು ನಡೆಸಿಕೊಟ್ಟರು. ಒಂದನೇ ತರಗತಿಗೆ ದಾಖಲಾತಿ ಗೊಂಡ ವಿದ್ಯಾರ್ಥಿಗಳಿಗೆ ರೊ. ಚಂದ್ರಶೇಖರ್ ಪೆ ರಾಲು ಪೂರ್ವಾಧ್ಯಕ್ಷ, ಇವರು ವಿದ್ಯಾರ್ಥಿ ವೇತನ ವಿತರಣೆ ಮಾಡಿದರು.
ಸಭೆಯ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷೆ ರೊ. ಯೋಗಿತ ಗೋಪಿನಾಥ್ ವಹಿಸಿಕೊಂಡಿದ್ದರು. ಸಭೆಯಲ್ಲಿ ಶ್ರೀ ಮೋಹನ್ ದಾಸ್ ಕುಕ್ಕುಡೇಲು, ಅಧ್ಯಕ್ಷರು ಶಾಲಾ ಅಭಿವೃದ್ಧಿ ಮೇಲುಸ್ತುವರಿ ಸಮಿತಿ , ಶ್ರೀ ದೇವದಾಸ ಕುಕ್ಕು ಡೇಲು, ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ, ಶ್ರೀಮತಿ ಶಿಲ್ಪ, ಮುಖ್ಯ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಾಲು, ರೊ.ಡಾ. ಹರ್ಷಿತಾ ಪುರುಷೋತ್ತಮ್, ಕಾರ್ಯದರ್ಶಿ , ರೊ. ಮಧುಸೂದನ್ ಕುಂಭಕೋಡು, ರೊ. ಲತಾ ಮಧುಸೂದನ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷ ರೊ. ಆನಂದ ಖಂಡಿ ಗ , ರೊ. ಸನತ್ ಪಿ., ರೊ. ಮಧುರ ಜಗದೀಶ್, ರೊ. ಸತೀಶ್ ಕೆ. ಜಿ., ರೊ. ಡಾ. ರಾಮಮೋಹನ್, ಶಾಲಾ ಶಿಕ್ಷಕರು ,ಪೋಷಕರು ಹಾಗೂ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.