ಸುಳ್ಯದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿ ಮುಂಭಾಗದ ರಸ್ತೆಯಲ್ಲಿ ಬಟರ್ ಫ್ರುಟ್ಸ್ ಮಾರಾಟ ಮಾಡುವ ವ್ಯಾಪಾರಿಗೆ ಗ್ರಾಹಕರೊಬ್ಬರು ಮೋಸ ಮಾಡಿರುವುದಾಗಿ ಅವರು ದೂರಿಕೊಂಡಿದ್ದಾರೆ.
ಜು.25ರಂದು ಸಂಜೆ 800 ಬಿಳಿ ಬಣ್ಣದ ಕಾರಿನಲ್ಲಿ ಬಂದ ಗ್ರಾಹಕರೊಬ್ಬರು ಅಂಗಡಿಗೆ ಬಂದು 2 ಕೆ.ಜಿ. ಬಟರ್ ಫ್ರುಟ್ಸ್ ಖರೀದಿದರೆನ್ನಲಾಗಿದೆ. ಈ ವೇಳೆ ಆ ಗ್ರಾಹಕ ತನ್ನಲ್ಲಿ ಕ್ಯಾಶ್ ಇಲ್ಲ.ಗೂಗಲ್ ಪೇ ಮಾಡುವೆ. ನನಗೆ ನೀವು ಇನ್ನೂ 1000 ಕೊಡಿ, ಫ್ರುಟ್ಸ್ ಹಣ ಸೇರಿ ಒಟ್ಟು 1200 ಗೂಗಲ್ ಪೇ ಮಾಡ್ತೇನೆ ಎಂದು ಹೇಳಿದರೆಂದೂ, ಇದನ್ನು ನಂಬಿದ ವ್ಯಾಪಾರಿ ಅವರಿಗೆ 1000 ನೀಡಿದರೆನ್ನಲಾಗಿದೆ. ಗ್ರಾಹಕ ಗೂಗಲ್ ಪೇ ಮಾಡಿ ಕಾರು ಹತ್ತಿ ಹೋದರೆನ್ನಲಾಗಿದೆ. ಸಮಯ ಕಳೆದರೂ ವ್ಯಾಪಾರಿಯ ಅಕೌಂಟ್ ಗೆ ದುಡ್ಡು ಬಾರದಿರುವುದರಿಂದ ತಾನು ಮೋಸ ಹೋಗಿರುವುದಾಗಿ ಗೊತ್ತಾಯಿತು. ಈ ಕುರಿತು ಅವರು ಪೋಲೀಸ್ ದೂರು ನೀಡಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.
ಸುದ್ದಿ ಯೊಂದಿಗೆ ತಾನು ಮೋಸ ಹೋಗಿರುವ ಕುರಿತು ಹೇಳಿಕೊಂಡು ವ್ಯಾಪಾರಿ, 800 ಬಿಳಿ ಬಣ್ಣದ ಕಾರಿನಲ್ಲಿ ಬಂದವರು ನನಗೆ ಮೋಸ ಮಾಡಿದ್ದಾರೆ. ಕಾರಿನ ಒಳಗೆ 4 ಜನ ಇದ್ದರು. ಅವರೆಲ್ಲ ಮಲಯಾಳಂ ಮಾತನಾಡುತಿದ್ದರು. ಈ ರೀತಿ ಯಾರೂ ಮೋಸ ಹೋಗಬೇಡಿ ಎಂದು ಅವರು ಹೇಳಿದ್ದಾರೆ.