ಕೊಡಗು ಸಂಪಾಜೆ: ಚಡಾವಿನಲ್ಲಿ ಗಾಳಿ ಮಳೆಗೆ ಮನೆಗೆ ಹಾನಿ

0

ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರಿಂದ ಭೇಟಿ – ಪರಿಶೀಲನೆ

ಕೊಡಗು ಸಂಪಾಜೆ ಗ್ರಾಮದ ಚಡಾ ವಿನಲ್ಲಿ ಗಾಳಿ – ಮಳೆಗೆ ಮನೆಯ ಹಿಂಭಾಗ ಕುಸಿದು, ಹಾನಿ ಸಂಭವಿಸಿದ ಘಟನೆ ಜು.26ರಂದು ಸಂಭವಿಸಿದೆ.

ಚಡಾವಿನ ಸುಬ್ಬಮ್ಮ ಎಂಬವರ ಮನೆಯ ಹಿಂಭಾಗದ ಕೊಠಡಿ ಗಾಳಿ ಮಳೆಗೆ ಕುಸಿದಿದ್ದು, ಮನೆಯ ಮೇಲ್ಚಾವಣಿಯ ಶೀಟ್ ಗಳಿಗೆ ಹಾ ನಿ ಸಂಭವಿಸಿದೆ.

ಸ್ಥಳಕ್ಕೆ ಕೊ.ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರಮಾದೇವಿ ಕಳಗಿ ಹಾಗೂ ಗ್ರಾ.ಪಂ. ಸದಸ್ಯರು ಮತ್ತು ಸ್ಥಳೀಯರು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿರುವುದಾಗಿ ತಿಳಿದುಬಂದಿದೆ.