ಅ.16 : ಕೇರ್ಪಡ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಬಿಡುಗಡೆ

0

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಆ.೧೮ರಂದು ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ ನಡೆಯುವ ಪ್ರಯುಕ್ತ ಜು.೨೬ರಂದು ಪ್ರಧಾನ ಅರ್ಚಕ ಶ್ರೀಹರಿ ಕುಂಜೂರಾಯರ ವೈಧಿಕ ಕಾರ್ಯಕ್ರಮಗಳೊಂದಿಗೆ ಆಮಂತ್ರಣ ಬಿಡುಗಡೆಗೊಂಡಿತು.


ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ಕಾರ್ಯದರ್ಶಿ ವೆಂಕಪ್ಪ ಗೌಡ ಆಲಾಜೆ , ಶ್ರೀ ವರಮಹಾಲಕ್ಷ್ಮಿ ಪೂಜೆ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆ. ೧೬ರಂದು ಶ್ರೀ ವರಮಹಾಲಕ್ಷ್ಮಿ ವ್ರತ ಪೂಜಾ ಕಾರ್ಯದಂದು, ಬೆಳಿಗ್ಗೆ ೯ ಗಂಟೆಗೆ ಪ್ರಾರ್ಥನೆ ಪೂಜಾ ಪ್ರಾರಂಭ, ೧೧ ಗಂಟೆಗೆ ಧಾರ್ಮಿಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿರುವುದು.


ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲುರವರು, ಅಧ್ಯಕ್ಷತೆ ವಹಿಸಲಿರುವರು, ಪೂಜಾ ಸಮಿತಿ ಸಂಚಾಲಕರು ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಉಪಸ್ಥಿತರಿರುವರು, ಕವಿಗಳಾದ ಕೋಡಿಬೈಲು ಶ್ರೀಮತಿ ಅಶ್ವಿನಿ ಧಾರ್ಮಿಕ ಉಪನ್ಯಾಸ ನೀಡಲಿರುವರು , ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ,ಅನ್ನ ಸಂತರ್ಪಣೆ ನಡೆಯಲಿರುವುದು , ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸುವುದು ಮತ್ತು ೧೫೦ರೂ ನೀಡಿ ರಶೀದಿ ಪಡಕೊಂಡು ಪೂಜೆಗೆ ಕುಳಿತುಕೊಳ್ಳುವರು, ೧ಸೇರು ಅಕ್ಕಿ ಸೋನಾಮಸೂರಿ, ೧ ತೆಂಗಿನಕಾಯಿ, ದೀಪದ ಎಣ್ಣೆ, ೨ಬಾಳೆಲೆ , ೫ ವೀಳ್ಯದೆಲೆ, ೧ ಅಡಿಕೆ, ಹೂ, ೧ ನಾಣ್ಯ, ಚಮಚ , ಗ್ಲಾಸ್ ತರುವುದು ಎಂದು ಹಾಗೂ ತನುಮನ – ಧನಗಳ ಸಹಕಾರವನ್ನು ಬೇಕೆಂದು ದೇವಾಳದ ಪ್ರಕಟಣೆ ತಿಳಿಸಿದೆ.