ಜಯನಗರ: ಭಾರೀ ಗಾಳಿಗೆ ಮನೆಗಳಿಗೆ ಬಿದ್ದ ಮರ, ಮಳೆಯಿಂದ ತಡೆಗೋಡೆ ಕುಸಿತ

0

ಪರಿಸರದ ಸುಮಾರು 4 ಮನೆಗಳಿಗೆ ಅಪಾರ ಹಾನಿ

ಜು 26ರಂದು ತಡರಾತ್ರಿ ಬೀಸಿದ ಭಾರೀ ಗಾಳಿಗೆ ತೆಂಗಿನ ಮರ ಸೇರಿದಂತೆ ಇತರ ಮರಗಳು ಮುರಿದು ಬಿದ್ದು ಪರಿಸರದ ಸುಮಾರು ೪ ಮನೆಗಳಿಗೆ ಹಾನಿ ಯಾಗಿದ್ದು ಮಳೆಗೆ ಮನೆಯೊಂದರ ತಡೆಗೋಡೆ ಕುಸಿದು ಬಿದ್ದು ಅಪಾರ ಹಾನಿ ಸಂಭವಿಸಿದೆ.

ಜಯನಗರ ವುಡ್ & ವುಡ್ ಕಾರ್ಖಾನೆಗೆ ಹೋಗುವ ರಸ್ತೆಯಲ್ಲಿ ಹಮೀದ್ ಎಂ ಕೆ ಎಂಬುವರ ಮನೆಯ ಹಿಂಭಾಗದ ಮೇಲ್ಚಾವಣಿಗೆ ಬೃಹತ್ ಮರ ಒಂದು ಮುರಿದುಬಿದ್ದು ಮನೆಯ ಮೇಲ್ಚಾವಣಿ ಮತ್ತು ಗೋಡೆ ಬಿರುಕು ಬಿಟ್ಟಿದೆ.


ಜಯನಗರ ರುದ್ರಭೂಮಿ ಸಮೀಪ ನಾಗರಾಜ್ ಮೇಸ್ತ್ರಿ ಎಂಬವರ ಮನೆಯ ತಡೆಗೋಡೆ ಕುಸಿದು ಬಿದ್ದು ಅಪಾರ ಹಾನಿ ಸಂಭವಿಸಿದೆ. ಅದೇ ರೀತಿ ಆ ಮನೆಯ ಕೆಳಭಾಗದಲ್ಲಿರುವ ಆಮಿನ ಎಂಬುವರ ಮನೆ ಹಿಂಭಾಗದಲ್ಲಿದ್ದ ತೆಂಗಿನ ಮರವೊಂದು ಮುರಿದು ಬಿದ್ದು ಹಾನಿ ಸಂಭವಿಸಿದೆ.
ಈ ಎಲ್ಲಾ ಘಟನೆಗಳಿಂದ ಮನೆ ಮತ್ತು ಕಟ್ಟಡಗಳಿಗೆ ಹಾನಿಯಾಗಿದ್ದು ಅದೃಷ್ಟವಶಾತ್ ಮನೆಯಲ್ಲಿರುವ ಸದಸ್ಯರುಗಳಿಗೆ ಯಾವುದೇ ಅಪಾಯವಿಲ್ಲದೆ ಪಾರಗಿದ್ದಾರೆ.


ರಾತ್ರಿ ಸುಮಾರು ೧೨ ಗಂಟೆಯ ಸಮಯಕ್ಕೆ ಭಾರಿ ಬಿರುಗಾಳಿ ಬೀಸಿದ್ದು ಮತ್ತು ಮಳೆಯೂ ಕೂಡ ಬಂದಿದ್ದು ಈ ಅನಾಹುತಗಳು ಉಂಟಾಗಿದೆ.
ಹಾನಿಯಾಗಿರುವ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.