ಮತ್ತೆ ಮರುಕಳಿಸಿದ ವಿದ್ಯುತ್ ನೆಟ್ ವಕ್೯, ರಸ್ತೆ ಸಮಸ್ಯೆ

0

ಮಡಪ್ಪಾಡಿ ಗ್ರಾಮಸಭೆ

ಮಡಪ್ಪಾಡಿ ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಮಡಪ್ಪಾಡಿ ಯುವಕ ಮಂಡಲ ಸಭಾ ಭವನದಲ್ಲಿ ಜು.26ರಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರಿಮತಿ ಉಷಾಜಯರಾಮ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ನೋಡೆಲ್ ಅಧಿಕಾರಿ ಯಾಗಿ ಯುವಜನ ಸೇವಾ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ಆಗಮಿಸಿದ್ದರು.

ವಿದ್ಯುತ್ ಸಮಸ್ಯೆ‌ ಮತ್ತು‌ ನೆಟ್ ವಕ್೯ ಸಮಸ್ಯೆ ಸರಿಯಾಗದ ಬಗ್ಗೆ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಪ್ರಶ್ನಿಸಿದರು.‌

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಸಂಘ ಸಂಸ್ಥೆಗಳ ಪ್ರತಿನಿಧಿಗಳು , ಪಂಚಾಯತ್ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಹಾಜರಿದ್ದರು.