ನಾಳೆ ನಗರ ಗೌಡ ಸಮಿತಿ ವತಿಯಿಂದ ಆಟಿಯ ಸಂಭ್ರಮ

0

ಗೌಡರ ಯುವ ಸೇವಾ ಸಂಘ ಸುಳ್ಯ, ತಾಲೂಕು ಮಹಿಳಾ ಘಟಕ, ತಾಲೂಕು ತರುಣ ಘಟಕಗಳ ಸಹಯೋಗದೊಂದಿಗೆ ಸುಳ್ಯ ನಗರ ಗೌಡ ಸಮಿತಿ, ಮಹಿಳಾ ಘಟಕ, ತರುಣ ಘಟಕಗಳ ನೇತೃತ್ವದಲ್ಲಿ ಗೌಡ ಸಮಾಜ- ಬಾಂಧವರುಗಳ ಆಟಿ ಸಂಭ್ರಮ ಕಾರ್ಯಕ್ರಮವನ್ನು ಆಗಸ್ಟ್ 4 ರಂದು ಕೊಡಿಯಾಲಬೈಲಿನ ಗೌಡ ಸಮುದಾಯಭವನದಲ್ಲಿ ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ಆಕರ್ಷಕ ಸ್ಪರ್ಧೆಗಳು ಸಮಾಜದ ಎಲ್ಲಾ ವಯೋಮಾನದವರಿಗೆ ನಡೆಯಲಿದೆ. ಅಲ್ಲದೆ ಆಟಿ ಸಂಭ್ರಮದ ಭೋಜನವೂ ಕೂಡ ಗ್ರಾಮೀಣ ಶೈಲಿಯಲ್ಲಿದ್ದು ಆಡುಗೆ ತಯಾರಿಕೆಯನ್ನು ಎಲ್ಲಾ ಮನೆಗಳಿಂದ ತಯಾರಿಸಿ ತಂದು ಸಹ ಭೋಜನ ನಡೆಯಲಿದೆ.
ಸುಳ್ಯ ನಗರ ಸಮಿತಿಯ ಅಧ್ಯಕ್ಷರಾದ ರಾಕೇಶ್ ಕುಂಟಿಕಾನರವರ ಅಧ್ಯಕ್ಷತೆಯಲ್ಲಿ ನಿವೃತ್ತ ಅಧ್ಯಾಪಕರಾದ ಶ್ರೀ ಕುದ್ಪಾಜೆ ಸೋಮಯ್ಯ ಗೌಡ ಮತ್ತು ಶ್ರೀಮತಿ ಪದ್ಮಾವತಿ ಸೋಮಯ್ಯ ಗೌಡ ದಂಪತಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಿದ್ದಾರೆ.

ನಂತರ ಆಟಿ ತಿಂಗಳ ಮಹತ್ವವನ್ನು ನೆನಪಿಸುವ ವಿವಿಧ ಆಟೋಟ ಸ್ಪರ್ಧೆಗಳು ಜರುಗಲಿವೆ.

ಮಧ್ಯಾಹ್ನ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭ ನಡೆಯಲಿದ್ದು, ಗೌಡರ ಯುವ ಸೇವಾ ಸಂಘದ
ಅಧ್ಯಕ್ಷರಾದ ಪಿ. ಎಸ್. ಗಂಗಾಧರ ಇವರು ಅಧ್ಯಕ್ಷತೆ ವಹಿಸಲಿದ್ದು, ಆಟಿಯ ಬಗ್ಗೆ ವಿಶೇಷ ಮಹತ್ವವನ್ನು ಅರೆಭಾಷೆ ಚಿಂತಕರಾದ ದೊಡ್ಡಣ್ಣ ಬರೆಮೇಲು ತಿಳಿಸಲಿದ್ದಾರೆ.