ಅಧ್ಯಕ್ಷೆ- ಜಲಜಾಕ್ಷಿ ರೈ ಆಲೆಟ್ಟಿ, ಕಾರ್ಯದರ್ಶಿ- ಸರೋಜಿನಿ ಬಾರ್ಪಣೆ, ಖಜಾಂಜಿ- ಜಾನಕಿ ಮೈಂದೂರು
ಆಲೆಟ್ಟಿ ಕಸ್ತೂರಿ ಬಾ ಮಹಿಳಾ ಮಂಡಲದ ವಾರ್ಷಿಕ ಮಹಾಸಭೆಯು ಮ.ಮಂಡಲದ ಅಧ್ಯಕ್ಷೆ ಯಶೋಧ ಕುಡೆಕಲ್ಲು ರವರ ಅಧ್ಯಕ್ಷತೆಯಲ್ಲಿ
ಜು.27 ರಂದು ಮಹಿಳಾ ಮಂಡಲದ ಕಟ್ಟಡದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ 2023-24 ನೇ ಸಾಲಿನ ಲೆಕ್ಕ ಪತ್ರವನ್ನು ಖಜಾಂಜಿ ಬೇಬಿ ಆಲೆಟ್ಟಿ ಮಂಡಿಸಿದರು.
ಕಾರ್ಯದರ್ಶಿ ಜಲಜಾಕ್ಷಿ ಯವರು ವರದಿ ವಾಚಿಸಿದರು.
ಮುಂದಿನ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಅಧ್ಯಕ್ಷೆಯಾಗಿ ಜಲಜಾಕ್ಷಿ ರೈ ಆಲೆಟ್ಟಿ, ಕಾರ್ಯದರ್ಶಿ ಸರೋಜಿನಿ ಬಾರ್ಪಣೆ, ಉಪಾಧ್ಯಕ್ಷೆ ಗೀತಾಸುಧಾಮ ಆಲೆಟ್ಟಿ, ಖಜಾಂಜಿ ಜಾನಕಿ ಮೈಂದೂರು, ಜತೆ ಕಾರ್ಯದರ್ಶಿ ಉಷಾ ಕೆಳಗಿನ ಆಲೆಟ್ಟಿ, ನಿರ್ದೇಶಕರಾಗಿ ರೋಹಿಣಿ ಕುಡೆಕಲ್ಲು, ಮೀನಾಕ್ಷಿ ಗಡಿಪಣೆ, ಯಶೋಧ ಗುಂಡ್ಯ, ಹೇಮಾವತಿ ಕುಡೆಕಲ್ಲು, ಪೂರ್ಣಿಮಾ ಕುಂಚಡ್ಕ ರವರನ್ನು ಆಯ್ಕೆ ಮಾಡಲಾಯಿತು. ಸುಮನಾ ಕೃಪಾಶಂಕರ ಮತ್ತು ಜಾನಕಿ ಕುಂಚಡ್ಕ ಹಾಗೂಗೀತಾಸುಧಾಮ ಆಲೆಟ್ಟಿ ಯವರು ಆಟಿ ಆಚರಣೆಯ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ಶಾರದಾ ಹಾರ್ಕಜೆ ಪ್ರಾರ್ಥಿಸಿದರು. ಜಲಜಾಕ್ಷಿ ಆಲೆಟ್ಟಿ ಸ್ವಾಗತಿಸಿ, ರೋಹಿಣಿ ಕುಡೆಕಲ್ಲು ವಂದಿಸಿದರು. ಬಳಿಕ ಆಟಿಯ ವಿಶೇಷ ಖಾದ್ಯಗಳೊಂದಿಗೆ ಸಹ ಭೋಜನದ ವ್ಯವಸ್ಥೆ ಮಾಡಲಾಗಿತ್ತು.