ಮರ್ಕಂಜ – ಮಿನುಂಗೂರು ರಸ್ತೆಗೆ ಬೃಹದಾಕಾರದ ಮರ ಬಿದ್ದು ವಿದ್ಯುತ್ ಕಂಬಳಿಗೆ ಹಾನಿ

0

ಮರ್ಕಂಜ – ಮಿನುಂಗೂರು ರಸ್ತೆಗೆ ಬೃಹದಾಕಾರದ ಮರವೊಂದು ಬಿದ್ದು, ಕೆಲಕಾಲ ರಸ್ತೆ ಸಂಪರ್ಕ ಅಸ್ತವ್ಯಸ್ತಗೊಂಡು ವಿದ್ಯುತ್ ಕಂಬಗಳಿಗೆ ಹಾನಿ ಸಂಭವಿಸಿದ ಘಟನೆ ಜು.30ರಂದು ಬೆಳಿಗ್ಗೆ ಸಂಭವಿಸಿದೆ.

ರಸ್ತೆ ಬದಿಯಲ್ಲಿದ್ದ ಬೃಹದಾಕಾರದ ಮರ ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದು, ಮೂರು ವಿದ್ಯುತ್ ಕಂಬಗಳು ಮುರಿದಿರುವುದಾಗಿ ತಿಳಿದುಬಂದಿದೆ.
ರಸ್ತೆಗೆ ಮರ ಬಿದ್ದ ಕಾರಣದಿಂದಾಗಿ ಮರ್ಕಂಜ – ಮಿನುಂಗೂರು ರಸ್ತೆಯಲ್ಲಿ ಕೆಲಹೊತ್ತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಊರವರು ಸೇರಿ ಮರ ತೆರವು ಮಾಡಿರುವುದಾಗಿ ತಿಳಿದುಬಂದಿದೆ.