ಸಮಹಾದಿ ಮಸೀದಿ ಕಾಂಪೌಂಡ್ ಮಗುಚಿ ಮನೆಗೆ ಹಾನಿ

0

ಬಾರೀ ಮಳೆಯ ಪರಿಣಾಮ ಮುರುಳ್ಯ ಗ್ರಾಮದ ಸಮಹಾದಿ ಮಸೀದಿಯ ಹಿಂಬದಿಯ ಕಾಂಪೌಂಡ್ ಮಗುಚಿ ಬಿದ್ದು ಪಕ್ಕದ ಮನೆಗೆ ಹಾನಿ ಸಂಭವಿಸಿರುವುದಾಗಿ ತಿಳಿದುಬಂದಿದೆ.

ಕಾಂಪೌಂಡ್ ಬಿದ್ದ ಪರಿಣಾಮ ಪಕ್ಕದ ಮಹಮ್ಮದ್ ಎಂಬವರ ಮನೆಯ ಸಿಟೌಟ್ ಗೆ ಹಾನಿಯಾಗಿದೆ.

ಸ್ಥಳಕ್ಕೆ ಮುರುಳ್ಯ ಗ್ರಾ.ಪಂ. ಸಿಬ್ಬಂದಿಗಳು ಹಾಗೂ ವಿ.ಎ. ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ.

ಸಿಟೌಟ್ ಗೆ ಕಾಂಪೌಂಡ್ ಮಗುಚಿರುವುದರ ತೆರವು ಕಾರ್ಯದ ಕುರಿತು ಮನೆಯವರು ಅಧಿಕಾರಿಗಳಲ್ಲಿ ಕೇಳಿದರೆಂದೂ, ಪ್ರಾಕೃತಿಕ ವಿಕೋಪದಡಿ ಪರಿಹಾರಕ್ಕೆ ಅರ್ಜಿ ಕೊಡುವಂತೆ ಅಧಿಕಾರಿಗಳು ಹೇಳಿ, ಪರಿಶೀಲನೆ ನಡೆಸಿ ಹೋದರೆಂದು ತಿಳಿದುಬಂದಿದೆ.