ಬೆಳ್ಳಾರೆ: ಸ್ನೇಹಶ್ರೀ ಮಹಿಳಾ ಮಂಡಲದ ಮಹಾಸಭೆ, ಅಧ್ಯಕ್ಷರಾಗಿ ಪೂರ್ಣಿಮಾ ಪಡ್ಪು, ಕಾರ್ಯದರ್ಶಿ ಶೋಭಾ ಕುರುಂಬುಡೇಲು

0

ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆ ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಜು. 28ರಂದು ಸ್ನೇಹಿತರ ಕಲಾಸಂಘ ಬೆಳ್ಳಾರೆ ಇದರ ಸಭಾಂಗಣದಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಸುಜಾತ ಚೀಮುಳ್ಳುರವರ ಅಧ್ಯಕ್ಷತೆಯಲ್ಲಿ ನಡೆಯಿತು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಪೂರ್ಣಿಮಾ ಪೆರುವಾಜೆ ವಾಚಿಸಿದರು. ವಾರ್ಷಿಕ ಜಮಾಖರ್ಚಿನ ಲೆಕ್ಕಪತ್ರವನ್ನು ಕೋಶಾಧಿಕಾರಿ ಭಾರತಿ ಕೊಳಂಬಳ ಸಭೆಗೆ ಮಂಡಿಸಿದರು. ನಂತರ ವರ್ಷದ ಕಾರ್ಯಕ್ರಮಗಳ ಅವಲೋಕನ ನಡೆಯಿತು. ವೇದಿಕೆಯಲ್ಲಿ ಜತೆ ಕಾರ್ಯದರ್ಶಿ ಸವಿತಾ ಪೈ ಬೆಳ್ಳಾರೆ ಉಪಸ್ಥಿತರಿದ್ದರು. 2024 -25ರ ಸಾಲಿನ ನೂತನ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಪೂರ್ಣಿಮಾ ಪಡ್ಪು, ಕಾರ್ಯದರ್ಶಿಯಾಗಿ ಶೋಭಾ ಕುರುಂಬುಡೇಲು, ಕೋಶಾಧಿಕಾರಿಯಾಗಿ ಕುಸುಮ ಕುರುಂಬುಡೇಲು, ಉಪಾಧ್ಯಕ್ಷೆಯಾಗಿ ಪೂರ್ಣಿಮಾ ಪೆರುವಾಜೆ, ಜತೆ ಕಾರ್ಯದರ್ಶಿಯಾಗಿ ಶೋಭನಾ ಪನ್ನೆ, ನಿಕಟಪೂರ್ವ ಅಧ್ಯಕ್ಷರಾಗಿ ಸುಜಾತ ಚೀಮುಳ್ಳು, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸುಲೋಚನಾ ಕುಂಡಡ್ಕ, ಸೌಮ್ಯ ಮೂಡಾಯಿತೋಟ, ಶಶಿಕಲಾ ಉಮಿಕ್ಕಳ, ಸವಿತಾ ಪೈ ಬೆಳ್ಳಾರೆ, ನಂದಿನಿ ಉಮಿಕ್ಕಲ, ಇವರುಗಳನ್ನು ಸರ್ವಾನುಮತದಿಂದ ಆರಿಸಲಾಯಿತು. ಚುನಾವಣಾಧಿಕಾರಿಯಾಗಿ ಪೂರ್ವಧ್ಯಕ್ಷೆ ಕುಸುಮ ಕುರುಂಬುಡೇಲು ಕಾರ್ಯ ನಿರ್ವಹಿಸಿದರು. ಉಪಾಧ್ಯಕ್ಷೆ ಇಂದಿರಾ ಅಜಪಿಲ ವಂದಿಸಿದರು. ಪೂರ್ಣಿಮಾ ಪಡ್ಪು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.