ದುಗಲಡ್ಕ ಸಮೀಪ ನೀರಬಿದಿರೆ ಪರಿಸರದಲ್ಲಿ ಇಂದು ರಾತ್ರಿ ಸುಮಾರು 8.30 ಕ್ಕೆ ಭೂಮಿ ಅಡಿಯಿಂದ ಗುಡುಗಿನಂತಹ ಶಬ್ದ ಹಲವರಿಗೆ ಕೇಳಿದ್ದು ಈ ಬಗ್ಗೆ ಚರ್ಚೆ ನಡೆಯುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಂತೆ ಹಲವರು ಅನುಭವ ಹಂಚಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಕೆಲವರು ಸುದ್ದಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಇದು ಲಾರಿ ಟಯರ್ ಬ್ಲಾಸ್ಟ್ ಆದ ಶಬ್ದ ಅಂತ ಕೆಲವರು ಹೇಳಿದರೆ, ಈ ಶಬ್ದ ಅಷ್ಟು ಪರಿಸರದಲ್ಲಿ ಕೇಳಲು ಸಾಧ್ಯವಿಲ್ಲ. ಬೇರೆ ಕೆಲವು ಕಡೆಗಳಲ್ಲೂ ಕೇಳಿದೆ ಎಂದು ಮತ್ತೆ ಕೆಲವರು ಹೇಳಿದ್ದಾರೆ.