ಗುತ್ತಿಗಾರು ಗ್ರಾಮದ ಕಮಿಲ ನಿವಾಸಿ ವೆಂಕಮ್ಮ ಕೊಚ್ಚಿ ಜು.29 ರಂದು ಅಲ್ಪಾವಧಿಯ ಅಸೌಖ್ಯತೆಯಿಂದ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ದಿನೇಶ್, ಸತೀಶ್, ಪುತ್ರಿಯರಾದ ಶ್ರೀಮತಿ ಜಯಂತಿ ಸುಂದರ ಗೌಡ ಬರೆಪ್ಪಾಡಿ, ಶ್ರೀಮತಿ ವೇದಾವತಿ ಪುರುಷೋತ್ತಮ ಕೊಲ್ಚಾರು, ಶ್ರೀಮತಿ ಭಾರತಿ ಆನಂದ ರೋಟರಿ ಪುರ ಪುತ್ತೂರು ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.