ಬೆಳ್ಳಾರೆ ಕೆಪಿಎಸ್ ಹಿಂಬದಿಯಲ್ಲಿ ಅಪಾಯದಲ್ಲಿ ವಿದ್ಯುತ್ ಕಂಬ

0

ಬೆಳ್ಳಾರೆ ಕೆ.ಪಿ.ಎಸ್.ಹಿಂಬದಿ ಮುಖ್ಯ ರಸ್ತೆ ರಿಕ್ಷಾ ನಿಲ್ದಾಣದ ಬಳಿ ಬರೆ ಜರಿಯುತ್ತಿದ್ದು ವಿದ್ಯುತ್ ಕಂಬವೊಂದು ಅಪಾಯದ ಸ್ಥಿತಿಯಲ್ಲಿದೆ.


ಸುರಿಯುತ್ತಿರುವ ಭಾರೀ ಮಳೆಗೆ ಬರೆಯ ಮಣ್ಣು ಜರಿದು ಬೀಳುತ್ತಿದ್ದು ಇನ್ನಷ್ಟು ಬರೆ ಕುಸಿದು ಬಿದ್ದರೆ ವಿದ್ಯುತ್ ಕಂಬ ಕೂಡ ಬೀಳಲಿದೆ ಎಂಬ ಆತಂಕ ಎದುರಾಗಿದೆ.ಸಂಬಂಧ ಪಟ್ಟವರು ಈ ಬಗ್ಗೆ ಗಮನಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.