ಖಾಸಗಿ ವಾಹನದಲ್ಲಿ ಬಾಡಿಗೆ ಮಾಡುತ್ತಿದ್ದ ವಾಹನವನ್ನು ಅಡ್ಡಗಟ್ಟಿದ ಸುಳ್ಯ ಟೂರಿಸ್ಟ್ ವಾಹನ ಚಾಲಕ ಸಂಘದ ಸದಸ್ಯರು

0


ಪೊಲೀಸರ ಆಗಮನ : ಸುಳ್ಯ ಠಾಣೆಯಲ್ಲಿ ದೂರು


ವೈಟ್‌ಬೋರ್ಡ್ ಕಾರಿನಲ್ಲಿ ಬಾಡಿಗೆ ಹೋಗುತ್ತಿದ್ದುದನ್ನು ಆಕ್ಷೇಪ ವ್ಯಕ್ತಪಡಿಸಿ ಸುಳ್ಯದ ಪೈಚಾರಿನಲ್ಲಿ ಟೂರಿಸ್ಟ್ ವಾಹನ ಚಾಲಕ ಸಂಘದ ಸದಸ್ಯರು ಅಡ್ಡಗಟ್ಟಿ ಸ್ಥಳಕ್ಕೆ ಪೊಲೀಸರು ಬಂದು ಈ ಬಗ್ಗೆ ಸುಳ್ಯ ಠಾಣೆಯಲ್ಲಿ ದೂರು ನೀಡಿರುವ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ.


ಸುಳ್ಯದ ಕಟ್ಟಡ ಮತ್ತು ಕಾರ್ಮಿಕ ಸಂಘಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಗ್ರಾಮ ಗ್ರಾಮಗಳಿಗೆ ಕಾರ್ಮಿಕರ ಆರೋಗ್ಯ ತಪಾಸಣೆಗಾಗಿ ತೆರಳುವ ಸಮಯ ವೈಟ್‌ಬೋರ್ಡ್‌ನ ಖಾಸಗಿ ವಾಹನವನ್ನು ಬಾಡಿಗೆಗೆ ಮಾಡಿ ತೆರಳುತ್ತಿರುವ ಬಗ್ಗೆ ಟೂರಿಸ್ಟ್ ವಾಹನ ಚಾಲಕ ಸಂಘದ ಸದಸ್ಯರಿಗೆ ಗೊತ್ತಾಯಿತು. ಇದನ್ನು ಆಕ್ಷೇಪಿಸಿದ ಅವರು ಕಾರನ್ನು ಹಿಂಬಾಲಿಸಿ ಪೈಚಾರು ಬಳಿ ಅಡ್ಡಗಟ್ಟಿ ಪೊಲೀಸರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಬಂದ ಪೊಲೀಸರು ಎರಡೂ ಕಡೆಯವರನ್ನು ಸುಳ್ಯ ಠಾಣೆಗೆ ಕರೆದೊಯ್ದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದಕ್ಕೆ ಸಂಬಧಿಸಿದಂತೆ ವಾಹನ ಮಾಲಕ ಮತ್ತು ಚಾಲಕರ ಸಂಘದ ಅಧ್ಯಕ್ಷ ಈ ರೀತಿ ಆಗುತ್ತಿರುವುದು ಹೊಸದೇನಲ್ಲ. ಹಲವಾರು ಸಮಯದಿಂದ ಖಾಸಗಿ ವಾಹನದವರು ಬಾಡಿಗೆ ಮಾಡುತ್ತಿದ್ದು, ಇದರಿಂದ ನಮಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಇಲಾಖೆಯವರು ಇದನ್ನು ತಡೆಗಟ್ಟಿ ನ್ಯಾಯ ಕೊಡಿಸಬೇಕು ಎಂದು ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿದು ಬಂದಿದೆ.