ಗುತ್ತಿಗಾರಿನ ಮುಖ್ಯೋಪಾಧ್ಯಾಯ ನೆಲ್ಸನ್ ಕ್ಯಾಸ್ಟಲಿನೊ ವರ್ಗಾವಣೆ

0

ಗುತ್ತಿಗಾರು ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಪ್ರಭಾರ ಮುಖ್ಯ ಶಿಕ್ಷಕ ನೆಲ್ಸನ್ ಕ್ಯಾಸ್ಟಲಿನೊ ವರ್ಗಾವಣೆಗೊಂಡಿರುವುದಾಗಿ ತಿಳಿದು ಬಂದಿದೆ.

ಗಣಿತ ಶಿಕ್ಷಕ ನೆಲ್ಸನ್ ಕ್ಯಾಸ್ಟಲಿನೊ ಅವರು ಗುತ್ತಿಗಾರಿನಲ್ಲಿ 20 ವರ್ಷಗಳಿಂದ ಕೆಲಸ ನಿರ್ವಹಿಸುತಿದ್ದು ಈ ಅವಧಿಯಲ್ಲಿ ಒಟ್ಟಾಗಿ 7.6 ವರ್ಷಗಳ ಕಾಲ ಪ್ರಭಾರ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರಿಗೆ ವರ್ಗಾವಣೆಗೊಂಡಿದ್ದು ಆ. 1 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ .