ಜಟ್ಟಿಪಳ್ಳ ಮದ್ರಸದಲ್ಲಿ ವಿದ್ಯಾರ್ಥಿಗಳಿಗೆ ಟ್ರಾಫಿಕ್ ನಿಯಮದ ಬಗ್ಗೆ ಜಾಗೃತಿಯ ಪಾಠ

0

ಮದ್ರಸವೆಂದರೆ ಕೇವಲ ಧಾರ್ಮಿಕ ಶಿಕ್ಷಣದ ಕೇಂದ್ರ ಮಾತ್ರವಲ್ಲ.ಅಲ್ಲಿ ಮನುಷ್ಯ ಬದುಕಿಗೆ ಅಗತ್ಯವಾದ ಶಿಕ್ಷಣವೂ ಭೋದನೆ ಮಾಡಲಾಗುತ್ತಿದೆ.ಮನುಷ್ಯನು ಸುಸಂಸ್ಕೃತನಾಗಲು ಬೇಕಾದ ಸ್ವಭಾವ ಗುಣಗಳೆಲ್ಲವೂ ಅಲ್ಲಿ ತರಭೇತಿ ನೀಡಲಾಗುತ್ತಿದೆ.


ಉತ್ತಮ ನಾಗರೀಕನಾಗಲು, ದೇಶ ಸ್ನೇಹಿಯಾಗಲು,ಸಮಾಜ ಸೇವಕನಾಗಲು ಮೈಗೂಡಿಸಿಕೊಳ್ಳಬೇಕಾದ ಸದುಪದೇಶಗಳು ಮದ್ರಸದ ದೈನಂದಿನ ಪಾಠಗಳು. ಗೌರವ,ಪ್ರೀತಿ,ಕರುಣೆ,ವಾತ್ಸಲ್ಯ,ಸಹಾಯ ಸಹಕಾರ,ಗುಣ ನಡತೆ ಮಾತು ಕೃತಿಗಳಲ್ಲಿನ ಒಳಿತು ಕೆಡುಕಗಳ ವಿವರಣೆ ಮುಂತಾದ ಅನೇಕಾನೇಕ ಸದ್ಗುಣಗಳ ಪಾಠ ವೂ ಮದ್ರಸ ಶಿಕ್ಷಣದ ಅಡಿಪಾಯವಾಗಿದೆ.ಸಾಮಾಜಿಕ ಬದ್ದತೆ,ಸಾಮೂಹ್ಯ ಭಾದ್ಯತೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ.ರಸ್ತೆಯಲ್ಲಿನ ಕಲ್ಲು ಮುಳ್ಳುಗಳನ್ನು ತೆಗೆದಾಕುವುದು ಸತ್ಯವಿಶ್ವಾಸದ ಭಾಗವಾಗಿದೆಯೆಂಬ ಪ್ರವಾದಿ ಸಂದೇಶವನ್ನು ಮಕ್ಕಳಿಗೆ ಭೋದನೆ ಮಾಡುವ ಮೂಲಕ ಸಾರ್ವಜನಿಕ ಬದ್ದತೆಗೆ ಒತ್ತು ನೀಡಲಾಗುತ್ತಿದೆ. ಅದೇ ರೀತಿಯಾಗಿ ಮನುಷ್ಯನ ವೈಯಕ್ತಿಕ ಬದುಕಿನ ವಿಷಯಗಳ ಬಗ್ಗೆ ಜಾಗೃತಿ ಮಾಡಲಾಗುತ್ತಿದೆ.


ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ (ಸುನ್ನೀ ವಿಧ್ಯಾಭ್ಯಾಸ ಬೋರ್ಡ್) ಇದರ ಮೂರನೇ ತರಗತಿಯ ದುರೂಸುಲ್ ಇಸ್ಲಾಂ ಎಂಬ ಪಠ್ಯ ಪುಸ್ತಕದ ಹತ್ತನೇ ಪಾಠವು ಟ್ರಾಫಿಕ್ ನಿಯಮಗಳ ಪಾಲನೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಗುತ್ತಿದೆ.ಯಾತ್ರಾರ್ಥಿಯು ತನ್ನ ಯಾತ್ರೆಯುದ್ದಕ್ಕೂ ಅನುಸರಿಸಬೇಕಾದ ಧಾರ್ಮಿಕ ಚೌಕಟ್ಟುಗಳಿವೆ ಅವುಗಳನ್ನು ಕಾರ್ಯರೂಪಕ್ಕೆ ತರುವುದರ ಜೊತೆಯಲ್ಲಿ ,ವಾಹನ ಸವಾರರು ಪಾಲಿಸಬೇಕಾದ ಟ್ರಾಫಿಕ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಪ್ರಸ್ತುತ ಪಾಠ ವಿವರಿಸುತ್ತಿದೆ.ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸುವುದು,ಉಳಿದಂತೆ ಬೆಲ್ಟ್ ಧರಿಸಬೇಕಾದವರು ಬೆಲ್ಟ್ ಧರಿಸುವುದು,ರಸ್ತೆಯಲ್ಲಿನ ಸಿಗ್ನಲ್ಸ್ ಗಳನ್ನು ತಪ್ಪದೇ ಪಾಲಿಸುವುದು, ಮಿತವಾದ ವೇಗದಲ್ಲಿ ಚಲಿಸುವುದು ಮುಂತಾದ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುತ್ತದೆ.ಪಾದಚಾರಿಗಳು ಪಾಲಿಸಬೇಕಾದ ನಿಯಮಗಳ ಬಗ್ಗೆಯೂ ಅದು ಬೆಳಕು ಚೆಲ್ಲುತ್ತದೆ.ಅಧ್ಯಾಪಕರುಗಳು ವೈವಿಧ್ಯ ರೂಪಗಳಲ್ಲಿ ಅವುಗಳನ್ನು ವಿದ್ಯಾರ್ಥಿಗಳಿಗೆ ಭೋದಿಸಿ ಗಮನ ಸೆಳೆಯುತ್ತಿದೆ.
ಬುಸ್ತಾನುಲ್ ಉಲೂಂ ಮದ್ರಸ ಅಧ್ಯಾಪಕರುಗಳಾದ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ,ಸಿರಾಜ್ ಸಅದಿ ಅಲೆಕ್ಕಾಡಿ ಯವರು ಟ್ರಾಫಿಕ್ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ ಗಮನ ಸೆಳೆದರು.