ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳೆಲ್ಲಿ?
ಮಂಡೆಕೋಲು ಸಮೀಪದ ಬೆಳ್ಳಿಪ್ಪಾಡಿಯಲ್ಲಿ ಸುಮಾರು 22 ದಿನಗಳಿಂದ ಬಿ.ಎಸ್. ಎನ್.ಎಲ್. ನೆಟ್ ವರ್ಕ್ ಇಲ್ಲದೆ ಈ ಭಾಗದ 40 ಮನೆಯವರು ಸಮಸ್ಯೆ ಎದುರಿಸುತ್ತಿದ್ದಾರೆ.
ಮೊಬೈಲೇ ಜೀವನ ಎಂಬಂತಾಗಿರುವ ಇಂದಿನ ದಿನದಲ್ಲಿ ಬೆಳ್ಳಿಪ್ಪಾಡಿಯಲ್ಲಿ ನಿರಂತರ ನೆಟ್ ವರ್ಕ್ ಸಮಸ್ಯೆ ಎದುರಾಗಿದೆ. ಭಾರೀ ಮಳೆಯ ಪರಿಣಾಮ ಕೆಲವೆಡೆ ವಿದ್ಯುತ್ ಕಂಬ ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ವಿದ್ಯುತ್ ಬಂದರೆ ಮಾತ್ರ ನೆಟ್ ವರ್ಕ್ ಸಿಗುಂವಂತ ಸ್ಥಿತಿ ಬೆಳ್ಳಿಪ್ಪಾಡಿಯಲ್ಲಿ ನಿರ್ಮಾಣವಾಗಿದ್ದು, ಟವರ್ ನ ಮೋಡೆಮ್ ಸರಿಪಡಿಸಿ ವಿದ್ಯುತ್ ಇಲ್ಲದಿದ್ದರೂ ನೆಟ್ ವರ್ಕ್ ಸಿಗುವಂತಾದರೆ ಸಮಸ್ಯೆ ನಿವಾರಣೆಯಾದಂತೆ. ಈ ಸಮಸ್ಯೆ ನಿವಾರಣೆಗೆ ಬಿ.ಎಸ್.ಎನ್.ಎಲ್. ಹಾಗೂ ಸಂಸದರು, ಎಂ.ಎಲ್.ಎ. ಯವರು ಸ್ಪಂದಿಸಬೇಕಾಗಿದೆ.
“22 ದಿನಗಳಿಂದ ನೆಟ್ ವರ್ಕ್ ಇಲ್ಲದೆ ನಾವು 40 ಮನೆಯವರು ಸಮಸ್ಯೆ ಎದುರಿಸುತ್ತಿದ್ದೇವೆ. ಅಧಿಕಾರಿಗಳಿಗೆ ತಿಳಿಸಿದರೂ ಸ್ಪಂದನೆ ನೀಡುವುದಿಲ್ಲ. ಆದ್ದರಿಂದ ಜನಪ್ರತಿನಿಧಿಗಳು ಈ ಸಮಸ್ಯೆ ಗೆ ಸ್ಪಂದನ ನೀಡಬೇಕು.
- ರಚನ್ ಬೆಳ್ಳಿಪ್ಪಾಡಿ