ಕನಕಮಜಲು: ಬ್ಯಾಂಕ್ ಖಾತೆಯಿಂದ ಹಣ ವಂಚನೆ

0

ಒ ಟಿ ಪಿ ಕೇಳದೆ, ಫೋನ್ ಕೂಡ ಮಾಡದೆ ವಂಚಿಸಿದ ಕಳ್ಳರು

ಸುಳ್ಯದ ಕನಕಮಜಲು ನಿವಾಸಿ ಅಬ್ದುಲ್ಲಾ ಎ ಎಂ ಎಂಬುವವರ ಬ್ಯಾಂಕ್ ಖಾತೆಯಿಂದ ಸೈಬರ್ ವಂಚನೆ ಮೂಲಕ 1,14,466 ರೂ. ಹಣವನ್ನು 2 ದಿನದಲ್ಲಿ ವಂಚನೆ ಮಾಡಿದ್ದಾರೆ.

ಅಬ್ದುಲ್ಲಾ ರವರು ಮೂಲತಹ ಕನಕಮಜಲು ನಿವಾಸಿಯಾಗಿದ್ದು ಕಳೆದ 3 ವರ್ಷ ಗಳಿಂದ ಕೆಲಸದ ನಿಮಿತ್ತ ಪುತ್ತೂರಿನಲ್ಲಿ ವಾಸಿಸುತ್ತಿದ್ದಾರೆ.

ಹೊಟೇಲ್ ಕೆಲಸ ಮಾಡುವ ಇವರು ಕೆಲಸಕ್ಕೆ ಹೋಗಿದ್ದ ಸಮಯ ಅ. 1 ರಂದು ಇವರ ಫೋನ್ ನೆಟ್ವರ್ಕ್ ಏಕಾಏಕಿ ಬಂದ್ ಆಗಿದೆ. ಸಂಜೆಯವರೆಗೂ ನೆಟ್ವರ್ಕ್ ಬಾರದೆ ಇದ್ದಾಗ ಅವರು ತಮ್ಮ ಪತ್ನಿಯ ಬಳಿಇದ್ದ ಫೋನ್ ಮೂಲಕ ವೈಫಯ್ ಕನೆಕ್ಟ್ ಮಾಡಿ ತಮಗೆ ಬಂದಿದ್ದ ಮೆಸೇಜ್ ಹಾಗೂ ಕರೆಗಳ ಬಗ್ಗೆ ನೋಡಿ ಮತ್ತೆ ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲನೆ ಮಾಡಿದಾಗ ಇವರ ಖಾತೆಯಲ್ಲಿ ಇದ್ದ ಹಣದಿಂದ 1 ಲಕ್ಷ ರೂ ಮೈನಸ್ ತೋರಿಸಿದ್ದು ಆತಂಕ ಗೊಂಡ ಅವರು ಕೂಡಲೇ ತಮ್ಮ ಪತ್ನಿಗೆ ವಿಷಯ ಹೇಳಿದ್ದಾರೆ. ಬಳಿಕ ತಮ್ಮ ಸಂಭಂದಿಕರಲ್ಲಿ ವಿಷಯ ತಿಳಿಸಿದ್ದು ಅವರು ಸೈಬರ್ ವಂಚನೆ ಆಗಿರ ಬಹುದೆಂದು ಹೇಳಿದ್ದು ಮರು ದಿನ ಬೆಳಿಗ್ಗೆ ಅವರು ಕೂಡಲೇ ಸುಳ್ಯದಲ್ಲಿ ತಮ್ಮ ಖಾತೆಯೊಂದಿದ್ದ ಯೂನಿಯನ್ ಬ್ಯಾಂಕ್ ಗೆ ಬಂದು ವಿಚಾರಿಸಿ ತಮ್ಮ ಪಾಸ್ ಬುಕ್ ನೀಡಿ ಪರಿಶೀಲನೆ ನಡೆಸಿದಾಗ ಮತ್ತೆ ಇವರ ಖಾತೆಯಲ್ಲಿ ಉಳಿದಿದ್ದ 14ಸಾವಿರ ಹಣ ಬೆಳಿಗ್ಗೆ 6.55 ಕ್ಕೆ ಕಡಿತ ಗೊಂಡಿದೆ ಎಂದು ತಿಳಿದು ಬಂದಿದೆ. ಈ ರೀತಿಯಾಗಿ ಅವರು 2 ದಿನದಲ್ಲಿ ತಮ್ಮ ಖಾತೆಯಲ್ಲಿ ಇದ್ದ ಎಲ್ಲಾ ಮೊತ್ತವನ್ನು ಕಳೆದುಕ್ಕೊಂಡಿರುತ್ತಾರೆ.

ವಂಚನೆ ಗೊಳಗಾದ ಇವರು ಕೂಡಲೇ ಸೈಬರ್ ಕ್ರೈಮ್ ಇಲಾಖೆಗೆ ಮಾಹಿತಿ ನೀಡಿ ಸುಳ್ಯದ ಏರ್ಟೆಲ್ ಕಚೇರಿಗೆ ತೆರಳಿ ನೆಟ್ವರ್ಕ್ ಖಡಿತ ಗೊಂಡಿರುವ ಬಗ್ಗೆ ವಿಚಾರಿಸಿದಾಗ ಈ ನಂಬರ್ ಬ್ಲಾಕ್ ಹಾಗಿರುವುದಾಗಿ ತಿಳಿಸಿದ್ದಾರೆ.

ಕೂಡಲೇ ಅವರು ಸುಳ್ಯ ಠಾಣೆಗೆ ತೆರಳಿ ವಂಚನೆಗೊಳಗಾದ ಬಗ್ಗೆ ದೂರು ನೀಡಿದ್ದು ದೂರು ಸ್ವೀಕರಿಸಿರುವ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಇವರ ಖಾತೆಯಿಂದ ಅ 1 ಮತ್ತು 2 ರಂದು ಎಲ್ಲಾ ಅರ್ಧ ಘಂಟೆಗೆ ರೂ 5 ಸಾವಿರದಂತೆ ಬೇರೆ ಖಾತೆಗೆ ಇವರ ಎಲ್ಲಾ ಹಣ ವರ್ಗಾವಣೆ ಗೊಂಡಿದ್ದು ಇದೀಗ ಬ್ಯಾಂಕ್ ನವರು ಕೂಡ ಘಟನೆಯಿಂದ ತಬ್ಬಿಬ್ಬಾಗಿದ್ದಾರೆ.

ಒಟ್ಟಿನಲ್ಲಿ ಇತ್ತೀಚೆಗೆ ನಡೆಯುವ ಈ ಸೈಬರ್ ವಂಚನೆಯಿಂದ ಸಾರ್ವಜನಿಕರ ಬ್ಯಾಂಕ್ ನಲ್ಲಿರುವ ಹಣಕ್ಕೆ ಯಾವುದೇ ರಕ್ಷಣೆ ಇಲ್ಲಾ ಎಂಬ ಆತಂಕಕ್ಕೆ ಬಂದು ನಿಂತಿದ್ದಾರೆ ಎಂಬುದು ಸತ್ಯ ಸಂಗತಿ ಯಾಗಿದೆ.