ಸಂಪಾಜೆ ಗ್ರಾಮದ ಶ್ರೀಧರ ದುಗ್ಗಳರವರು ಪೊಲೀಸ್ ಇಲಾಖೆಯಲ್ಲಿ ಸುಧೀರ್ಘ 34ವರ್ಷ ಸೇವೆಗೈದು ಜುಲೈ 31ರಂದು ಸೇವೆಯಿಂದ ನಿವೃತ್ತಿ ಹೊಂದಿದರು.
ಇವರು 1981ರಿಂದ 1991ರ 9ವರ್ಷಗಳ ಕಾಲ ದೂರವಾಣಿ ಇಲಾಖೆಯಲ್ಲಿ ಸೇವೆಗೈದು 1991ರಲ್ಲಿ ಮಡಿಕೇರಿ ಎಂಪ್ಲೋಮೆಂಟ್ ರಿಜಿಸ್ಟ್ರೇಷನ್ ಕಚೇರಿಯಿಂದ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಹೊಂದಲು ಆದೇಶ ಬಂದ ಮೇಲೆಗೆ ಸಂದರ್ಶನದಲ್ಲಿ ಪೊಲೀಸ್ ಇಲಾಖೆಗೆ ಆಯ್ಕೆಗೊಂಡು ವಿರಾಜ್ ಪೇಟೆ ಟೌನ್ ಸ್ಟೇಷನ್ನಲ್ಲಿ ಪಿಸಿ ಯಾಗಿ ಆರುವರೆ ವರ್ಷ ಸೇವೆಗೈದರು.
ನಂತರ ನಾಪೊಕ್ಲು ಸ್ಟೇಷನ್ನಲ್ಲಿ ಆರು ವರ್ಷ ವಿರಾಜ್ ಪೇಟೆ ಗ್ರಾಮಾಂತರದಲ್ಲಿ 6ವರ್ಷ ನಂತರ ವಿರಾಜ್ ಪೇಟೆ ಗ್ರಾಮಾಂತರದಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಸೇವೆಗೈದು ವಿರಾಜ್ ಪೇಟೆ ಗ್ರಾಮಾಂತರದಿಂದ ಎಎಸ್ಐ ಪದವಿಹೊಂದಿ ಮಡಿಕೇರಿ ರೂರಲ್ ನಲ್ಲಿ 6ವರ್ಷ ಸೇವೆಗೈದು ಮಡಿಕೇರಿಯಿಂದ ಸಬ್ ಇನ್ಸ್ಪೆಕ್ಟರ್ ಪದವೊನ್ನತಿ ಹೊಂದಿ ಮಡಿಕೇರಿ ನಾಪೊಕ್ಲು ಸ್ಟೇಷನಲ್ಲಿ ಕರ್ತವ್ಯ ನಿರ್ವಹಿಸಿ ಜುಲೈ 31ರಂದು ನಿವೃತ್ತಿ ಹೊಂದಿದರು. ಇವರು ದುಗ್ಗಳ ಪದ್ಮಣ್ಣ -ಚೋಮಕ್ಕ ದಂಪತಿಗಳ ಐವರು ಪುತ್ರರಲ್ಲಿ ಕೊನೆಯವರಾಗಿದ್ದು 1-7ನೇ ತರರಗತಿ ವರೆಗೆ ಕಲ್ಲುಗುಂಡಿ ಸಹಿಪ್ರಾ ಶಾಲೆಯಲ್ಲಿ ವಿದ್ಯಾಭ್ಯಾಸಹೊಂದಿ 8-10ರ ವರೆಗೆ ಸಂಪಾಜೆ ಜೂನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸಮಾಡಿ 1991ರಲ್ಲಿ ಚೆಂಬು ಗ್ರಾಮದ ಮಾರ್ಪಡ್ಕ ಶೇಷಪ್ಪ -ವೆಂಕಮ್ಮ ದಂಪತಿಗಳ ಪುತ್ರಿ ಪಾರ್ವತಿಯವರನ್ನು ವಿವಾಹವಾದರು.
ಇವರ ಪುತ್ರಿ ಶೃತಿ ಅಳಿಯ ಅಮಿತ್ ಆಸ್ಟ್ರೇಲಿಯದಲ್ಲಿ ಉದ್ಯೋಗದಲ್ಲಿದ್ದಾರರೆ ಪುತ್ರ ಅಭಿಷೇಕ್ ಸೊಸೆ ರಶ್ಮಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಇವರು ಈಗ ಸಂಪಾಜೆಯಲ್ಲಿ ನೆಲೆಸಿರುತ್ತಾರೆ. ಇವರನ್ನು ಮಡಿಕೇರಿ ಎಸ್ ಪಿ ಆಫೀಸ್ ನಲ್ಲಿ ರಾಮರಾಜನ್ ಅವರು ದಂಪತಿಗಳನ್ನು ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಟ್ಟರು.