ಸುಳ್ಯ ಮುಖ್ಯ ರಸ್ತೆಯಲ್ಲಿ ವ್ಯಕ್ತಿಯೋರ್ವರ ನಗದು ಮತ್ತು ದಾಖಲೆಗಳು ಇದ್ದ ಬ್ಯಾಗ್ ಕಳೆದು ಹೋಗಿದೆ

0

ಪೆರಾಜೆ ನಿವಾಸಿ ಜಯ ಗರುಗುಂಜ ಎಂಬುವವರ ನಗದು ಮತ್ತು ಇತರ ದಾಖಲೆಗಳು ಪತ್ರಗಳಿದ್ದ ಬ್ಯಾಗ್ ಸುಳ್ಯ ನಗರದಲ್ಲಿ ಕಳೆದು ಹೋಗಿದೆ.


ಇದು ಯಾರಿಗಾದರೂ ಸಿಕ್ಕಿದ್ದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ತಂದು ನೀಡುವಂತೆ ಸುಳ್ಯ ಠಾಣಾ ಪೊಲೀಸ್ ಪ್ರಕಟಣೆಯಲ್ಲಿ ನೀಡಿದೆ.


ತಂದುಕೊಟ್ಟವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜಯ ಗರ್ಗುಂಜ ರವರು ಆಗಸ್ಟ್ ಒಂದರಂದು ರಾತ್ರಿ ದ್ವಿಚಕ್ರ ವಾಹನದಲ್ಲಿ ತಮ್ಮ ಮನೆಗೆ ಹೋಗುತ್ತಿದ್ದ ಸಂದರ್ಭ ಸುಳ್ಯ ರಥಬೀದಿ ಜಂಕ್ಷನ್ ನಿಂದ ಗಾಂಧಿನಗರದ ಪೆಟ್ರೋಲ್ ಬಂಕ್ ನ ಮಧ್ಯ ಮುಖ್ಯ ರಸ್ತೆಯಲ್ಲಿ ಬ್ಯಾಗ್ ಕಳೆದುಕೊಂಡಿದ್ದು ಈ ಬ್ಯಾಗಿನಲ್ಲಿ ಸುಮಾರು 60 ಸಾವಿರ ರೂಪಾಯಿ ನಗದು ಮತ್ತು ಇತರ ದಾಖಲೆ ಪತ್ರಗಳು ಇದ್ದವು ಎಂದು ತಿಳಿದುಬಂದಿದೆ.