ಸುಬ್ರಹ್ಮಣ್ಯ ರೋಟರಿ ಹಾಗೂ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಆಟಿ ಆಚರಣೆ

0


ಸುಬ್ರಹ್ಮಣ್ಯ ರೋಟರಿ ಕ್ಲಬ್ ಹಾಗೂ ಇನ್ನರ್ವೇಲ್ ಕ್ಲಬ್ ವತಿಯಿಂದ ಏನೇಕಲ್ಲು ರೈತ ಯುವಕ ಮಂಡಲ ಸಭಾಂಗಣದಲ್ಲಿ ಆಟಿ ಆಚರಣೆ ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ನಾಯರ್ ನೆರವೇರಿಸಿ ಮಾತನಾಡಿ “ಆಟಿ ತಿಂಗಳು ಎಂಬುದು ಬಹಳ ಕಷ್ಟದ ಕಾಲ ಜನರಿಗೆ ಒಪ್ಪತ್ತು ಊಟಕ್ಕೆ ಕೂಡ ಹಣವಿಲ್ಲದೆ ಇರತಕ್ಕಂತಹ ಸಮಯವಾಗಿದೆ. ಈ ತಿಂಗಳಲ್ಲಿ ಜನರು ಪ್ರಕೃತಿಯಲ್ಲಿ ದೊರೆಯುವಂತಹ ಕಣಿಲೆ ಸಜಂಕ್ ಪತ್ರೊಡೆ ಎಲೆ ಕೆಸು ಎಲೆ ಮರದ ತೊಗಟೆಯಿಂದ ತಯಾರಿಸುವ ಕಷಾಯ ಮುಂತಾದವುಗಳನ್ನು ತಂದು ಸೇವಿಸುವಂತದ್ದಾಗಿದೆ. ಆಂಟಿ ತಿಂಗಳು ಜಿಡಿಗುಡ್ಡ ಮಳೆ ಸುರಿಯುತ್ತಿರುವ ಕಾರಣ ರೈತರಿಗೆ ವ್ಯಾಪಾರಸ್ಥರಿಗೆ ಕೆಲಸವಿಲ್ಲದೆ ಆಟಿಯ ಆಟಗಳಾದ ಚೆನ್ನಮಣೆ ಇಸ್ಪೀಟ್ ಆಟದಲ್ಲಿ ಸಮಯ ಕಳೆಯುವಂಥಾಗಿದೆ ಅಲ್ಲದೆ ಎಲ್ಲರೂ ಸೇರಿ ತಮ್ಮ ತಮ್ಮ ಮನೆಯಲ್ಲಿ ಪ್ರಕೃತಿಯಲ್ಲಿ ದೊರೆಯುವ ಆಹಾರ ಪದಾರ್ಥಗಳನ್ನು ತಯಾರಿಸಿ ಒಟ್ಟಾಗಿ ಸೇವಿಸಿ ಸಂಭ್ರಮಿಸುವ ದಿನವೂ ಆಗಿದೆ. ಇಂತಹ ಕಷ್ಟಕಾಲದ ದಿನದಲ್ಲಿ ನಾವು ನಾಟಿ ಆಚರಣೆಯನ್ನ ಒಟ್ಟಾಗಿ ಸೇರಿ ಮಾಡುವಂಥದ್ದು ತುಂಬಾ ಒಳ್ಳೆಯದು” ಎಂದು ನುಡಿದರು.


ವೇದಿಕೆಯಲ್ಲಿ ಇನ್ನರ್ ವೀಲ್ ಕ್ಲಬ್‌ನ ಅಧ್ಯಕ್ಷೆ ಶೃತಿ ಮಂಜುನಾಥ್, ನಿಕಟ ಪೂರ್ವ ಅಧ್ಯಕ್ಷೆ ವೇದ ಶಿವರಾಂ, ಕಾರ್ಯದರ್ಶಿ ಚಂದ್ರ ಹೊನ್ನಪ್ಪ, ಹಾಗೂ ರೋಟರಿ ಕ್ಲಬ್ ಕಾರ್ಯದರ್ಶಿ ಚಿದಾನಂದ ಕುಳ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಇನ್ನರ್‌ವ್ಹೀಲ್ ಸದಸ್ಯರುಗಳು ತಮ್ಮ ಮನೆಯಲ್ಲಿ ತಯಾರಿಸಿ ತಂದ ಆಟಿ ತಿಂಗಳ ವಿವಿಧ ಬಗೆಯ ಹಾಗೂ ವಿಶೇಷವಾದ ಅಡುಗೆಯನ್ನು ಎಲ್ಲರೂ ಒಟ್ಟು ಸೇರಿ ಸೇವಿಸಿದರು ಇನ್ನ ವೀಲ್ ಕ್ಲಬ್ಬಿನ ಆನೆಟ್ಟುಗಳಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಏರ್ಪಡಿಸಲಾಯಿತು. ಹಾಗೆ ಇನ್ನರ್‌ವ್ಹೀಲ್ ಕ್ಲಬ್ಬಿನ ಸದಸ್ಯರಿಗೆ ರೋಟರಿ ಕ್ಲಬ್ಬಿನ ಸದಸ್ಯರಿಗೆ ಕೂಡ ವಿವಿಧ ಆಟಗಳನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಇನ್ನ ವೀಲ್ ಕ್ಲಬ್ಬಿನ ಪೂರ್ವ ಅಧ್ಯಕ್ಷರುಗಳು ,ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷರುಗಳು ,ಇನ್ನರ್‌ವ್ಹೀಲ್ ಸದಸ್ಯರುಗಳು ,ರೋಟರಿ ಸದಸ್ಯರುಗಳು ಹಾಜರಿದ್ದರು.